ವಿಶ್ವದ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿರು ಕಿಲೌಯಾವು ಬುಧವಾರ ಸ್ಫೋಟಗೊಳ್ಳಲು ಆರಂಭಿಸಿದೆ. ದೊಡ್ಡ ದ್ವೀಪದಲ್ಲಿ ಹೊಳೆಯುವ ಅದ್ಭುತವಾದ ಲಾವಾದ ಕಾರಂಜಿಗಳನ್ನು ಸೃಷ್ಟಿಸುತ್ತಿದೆ.
ಅಮೆರಿಕ ಜಿಯೋಲಾಜಿಕಲ್ ಸರ್ವೇಯ ಹವಾಯಿಯನ್ ಜ್ವಾಲಾಮುಖಿ ವೀಕ್ಷಣಾಲಯವು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಕಿಲೌಯೆಯ ಶಿಖರದಿಂದ ಬುಧವಾರ ಬೆಳಗಿನ ಜಾವ ಜ್ವಾಲಾಮುಖಿ ಸ್ಫೋಟಗೊಂಡಿದೆ. ಶಿಖರ ಕ್ಲಾಯಲ್ಡೆರಾದಲ್ಲಿನ ಹಲೇಮೌ ಕುಳಿಯೊಳಗೆ ಸ್ಫೋಟ ಸಂಭವಿಸುತ್ತಿದೆ ಎಂದು ತಿಳಿಸಿದೆ. ಜೊತೆಗೆ ಕುಳಿ ನೆಲದ ಮೇಲ್ಮೈಯಲ್ಲಿ ಲಾವಾ ಹರಿಯುತ್ತಿರುವ ಮತ್ತು ಅಲ್ಲಿ ಬಿರುಕು ಬಿಟ್ಟಿರುವ ಫೋಟೋಗಳನ್ನು ಹಂಚಿಕೊಂಡಿದೆ.
ಬೆಳಿಗ್ಗೆ ಲಾವಾ ಹೊರಚಿಮ್ಮಿದ್ದು, ಶಿಖರ ಲ್ಯಾಲ್ಡೆರಾ ಒಳಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಯಾವುದೇ ಮನೆಗಳಿಗೆ ಅಥವಾ ಮೂಲಸೌಕರ್ಯಗಳಿಗೆ ತೊಂದರೆಯಿಲ್ಲ. ನಿನ್ನೆ ಬೆಳಿಗ್ಗೆ ಸುಮಾರು 4.30ಕ್ಕೆ 150 ಅಡಿ ಎತ್ತರದ ಕಾರಂಜಿಗಳನ್ನು ನೋಡಲು ಸಾಧ್ಯವಾಯಿತು. ನಾನು ಸುಮಾರು 15 ಕಾರಂಜಿಗಳನ್ನು ನೋಡಿ ಎಂದು ಛಾಯಾಗ್ರಹಾಕರೊಬ್ಬರು ಹೇಳಿದ್ದಾರೆ.