ಮರೆವಣಿಗೆಯಲ್ಲಿ ಜನರ ಮೇಲೆ ಹರಿದ ಕಾರು 5 ಸಾವು 40 ಮಂದಿಗೆ ಗಾಯ

1 min read

 ಮರೆವಣಿಗೆಯಲ್ಲಿ ಜನರ ಮೇಲೆ ಹರಿದ ಕಾರು 5 ಸಾವು 40 ಮಂದಿಗೆ ಗಾಯ

ಭಾನುವಾರ ನಡೆದ ಕ್ರಿಸ್‌ಮಸ್ ಮೆರವಣಿಯಲ್ಲಿ ವ್ಯಕ್ತಿಯೊಬ್ಬ ಕಾರು ನುಗ್ಗಿಸಿ 5 ಜನರ ಸಾವಿಗೆ ಕಾರಣವಾಗಿರುವ ಘಟನೆ ಅಮೇರಿಕಾದ ದೇಶದ ವಿಸ್ಕಾನ್ಸಿನ್‌ ರಾಜ್ಯದಲ್ಲಿ ನಡೆದಿದೆ. ಐದು ಜನರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿಲ್ವಾಕಿಯ ಉಪನಗರವಾದ ವೌಕೇಶಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ಸಂಪ್ರದಾಯಿಕ ಕ್ರಿಸ್ಮಸ್ ಮರವಣಿಗೆಯನ್ನ ರಸ್ತೆಯ ಎರಡು ಬದಿಗಳಲ್ಲಿ ನಿಂತು ನೋಡುತ್ತಿದ್ದ  ವೀಕ್ಷಕರ ಮೇಲೆ ಕೆಂಪು ಬಣ್ಣದ  SUV ಕಾರು,  ಬ್ಯಾರಿಕೇಡ್‌ಗಳನ್ನು ಭೇದಿಸಿ ಜನರತ್ತ ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಈ ಘಟನೆಯಲ್ಲಿ “5 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ, ಸಾವು ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಎಂದು ವೌಕೇಶ ಪೊಲೀಸ್ ಇಲಾಖೆ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.ಒಟ್ಟು 11 ವಯಸ್ಕರು ಮತ್ತು 12 ಮಕ್ಕಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಗ್ನಿಶಾಮಕ ಮುಖ್ಯಸ್ಥ ಸ್ಟೀವನ್ ಹೊವಾರ್ಡ್ ಸುದ್ದಿಗಾರರಿಗೆ ತಿಳಿಸಿದರು.

ಸಧ್ಯ ಎಸ್ ಯು ವಿ ಚಾಲಕನನ್ನ ಬಂಧಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸಲಾಗುತ್ತಿದೆ. ಆಕ್ಸಿಡೆಂಟ್ ಗೂ ಮುನ್ನ ಚಾಲಕ ಗನ್ ಫೈರ್ ಮಾಡಿದ ಬಗ್ಗೆ ಮಾಹಿತಿ ಇದ್ದು, ಯಾವುದೇ ಭಯೋತ್ಪಾದಕ ಸಂಘಟನೆಗೆ ಸೇರಿದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd