ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೇಯಸಿಯ ಮನೆಯಲ್ಲಿ ಇದ್ದ ಗಂಡನನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ನಡೆದಿದೆ.
ಈ ದಂಪತಿ ಕಳೆದ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೂ ಪತಿಗೆ ಮಾತ್ರ ಇನ್ನೊಬ್ಬಳ ಮೇಲೆ ವ್ಯಾಮೋಹವಿತ್ತು. ಈತನ ಪ್ರೇಯಸಿಗೆ ಮದುವೆಯಾಗಿ 15 ವರ್ಷಗಳೇ ಕಳೆದಿವೆ. ಆದರೆ, ಆಕೆಯ ಪತಿ ತೀರಿಕೊಂಡಿದ್ದ. ಇದರಿಂದಾಗಿ ಇವರಿಬ್ಬರ ಮಧ್ಯೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಹೆಂಡತಿಗೆ ಗೊತ್ತಾಗದ ಹಾಗೆ ಇಷ್ಟು ದಿನ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡನಿಗೆ ಈಗ ಪತ್ನಿ ಶಾಕ್ ಕೊಟ್ಟಿದ್ದಾಳೆ.
ತನ್ನ ಕೆಲ ಸಂಬಂಧಿಕರ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದು ಪತಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.








