ಆನೇಕಲ್: ಪತ್ನಿಯೊಬ್ಬಳು ತನ್ನ ಲವ್ವರ್ ಮಾತು ಕೇಳಿ ಪತಿಯ ಕೈಯಲ್ಲಿ ತಗಲಾಕಿಕೊಂಡಿರುವ ಘಟನೆ ನಡೆದಿದೆ.
ಆನೇಕಲ್ ನಲ್ಲಿ (Anekal) ಈ ಘಟನೆ ನಡೆದಿದೆ. ಮಾರುತಿ ಬಡಾವಣೆಯಲ್ಲಿ ಕಿರಣ್ ಹಾಗೂ ವಿದ್ಯಾರಾಣಿ ಎಂಬುವವರು ವಾಸಿಸುತ್ತಿದ್ದರು. ವಿದ್ಯಾರಾಣಿಗೆ ಸಾಮಾಜಿಕ ಜಾಲತಾಣದ ಮೂಲಕ ರಾಮ್ ಪ್ರಸಾದ್ ಎಂಬ ವ್ಯಕ್ತಿ ಪರಿಚಯವಾಗಿದ್ದರು. ಆ ನಂತರ ಇಬ್ಬರೂ ಚಾಟಿಂಕ್ ಮಾಡಲು ಆರಂಭಿಸಿದ್ದಾರೆ. ಈ ವಿಚಾರ ಪತಿಗೆ ಗೊತ್ತಾಗಿ ಮೊಬೈಲ್ ಹಾಳು ಮಾಡಿದ್ದರು. ನಂತರ ಬೇರೆ ನಂಬರ್ ಮೂಲಕ ರಾಮ್‍ಪ್ರಸಾದ್‍ಗೆ ವಿದ್ಯಾರಾಣಿ ತಿಳಿಸಿದ್ದಳು. ಕೋಪಗೊಂಡ ಪ್ರಿಯಕರ ರಾಮ್ ಪ್ರಸಾದ್, ವಿದ್ಯಾರಾಣಿ ಗಂಡನಿಗೆ ಬುದ್ಧಿ ಕಲಿಸಲು, ನಾನು ಕಳುಹಿಸುವ ಮೆಸೇಜ್ ಗಂಡನ ನಂಬರ್ ನಿಂದ ಫಾರ್ವರ್ಡ್ ಮಾಡಲು ಸೂಚನೆ ನೀಡಿದ್ದಾರೆ.
ಡಿ. 5ರಂದು ಆರ್‍ಡಿಎಕ್ಸ್ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕುವ ಮೆಸೇಜ್ ಅನ್ನು ಕಿರಣ್ ನಂಬರ್ ನಿಂದ ತನಿಖಾ ಸಂಸ್ಥೆಗಳಿಗೆ ಕಳುಹಿಸಲು ಹೇಳಿದ್ದಾನೆ. ಇದನ್ನು ನಂಬಿದ ವಿದ್ಯಾರಣಿ ಹಾಗೆಯೇ ಕಳುಹಿಸಿದ್ದಾಳೆ. ಆ ನಂತರ ಆ ಮೆಸೆಜ್ ಡಿಲಿಟ್ ಮಾಡಿದ್ದಾಳೆ. ನಂಬರ್ ಮೂಲ ಹುಡುಕಿ ತನಿಖಾ ಸಂಸ್ಥೆಗಳು, ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ.