ಆನೇಕಲ್: ಕಾಡಾನೆಯೊಂದು ವೈರ್ ತುಳಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ ತಾವರೆಕೆರೈ ಹತ್ತಿರ ನಡೆದಿದೆ. ಕಾಡಾನೆಯೊಂದು ಇಲ್ಲಿ ವಿದ್ಯುತ್ ತಂತಿ ಕಚ್ಚಿ ಸಾವನ್ನಪ್ಪಿದೆ. ಕಾಡಾನೆಯು ಬನ್ನೇರುಘಟ್ಟ ಅರಣ್ಯದಿಂದ ತಮಿಳುನಾಡಿನತ್ತ ಹೋಗಿದೆ ಎನ್ನಲಾಗಿದೆ.
ಕಾಡಾನೆ ಅರಣ್ಯ ಬಿಟ್ಟು ಆಹಾರ ಅರಸಿ ಬಂದಿದ್ದವು. ರೈತರೊಬ್ಬರು ಕೋಳಿ ಫಾರಂ, ಬೋರ್‌ವೆಲ್‌ಗೆ ವಿದ್ಯುತ್ ತಂತಿ ಸುತ್ತಿದ್ದರು. ಆದರೆ, ಇಲ್ಲಿ ತೆರಳಿದ ಕಾಡಾನೆಯೊಂದು ವಿದ್ಯುತ್ ವೈರ್ ಕಚ್ಚಿ ಸಾವನ್ನಪ್ಪಿದೆ. ನೆಲದೊಳಗೆ ಅಥವಾ ಕಂಬಕ್ಕೆ ತಂತಿ ಹಾಕಿದ್ದರೆ ಅವಘಡ ಆಗುತ್ತಿರಲಿಲ್ಲ. ತೋಟದ ನೆಲದ ಮೇಲೆ ತಂತಿಹಾಕಿ ಹಾಗೆ ಬಿಟ್ಟಿದ್ದರಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಕೋಳಿ ಫಾರಂ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ.