ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ kalburagi saaksha tv
ಕಲಬುರಗಿ : ನಗರದ ಪ್ರಗತಿ ಕಾಲೋನಿಯಲ್ಲಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
22 ವರ್ಷದ ಜ್ಯೋತಿ ಶವವಾಗಿ ಪತ್ತೆಯಾದ ಮಹಿಳೆಯಾಗಿದ್ದಾರೆ.
ಜ್ಯೋತಿಯನ್ನ ಆಕೆಯ ಪತಿಯೇ ಕೊಲೆ ಮಾಡಿ ಫ್ಯಾನಿಗೆ ನೇಣು ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಜ್ಯೋತಿ ಅವರಿಗೆ ಏಳು ತಿಂಗಳ ಹಿಂದಷ್ಟೆ ಲೋಕೇಶ್ ಎಂಬುವವರ ಜೊತೆ ವಿವಾಹವಾಗಿತ್ತು.
ಆರಂಭದಲ್ಲಿ ಚೆನ್ನಾಗಿಯೇ ಇದ್ದ ಲೋಕೇಶ್ ಹಣಕ್ಕಾಗಿ ಪ್ರತಿದಿನ ಜ್ಯೋತಿಯನ್ನು ಪೀಡಿಸುತ್ತಿದ್ದನಂತೆ.
ಅದು ಅಲ್ಲದೇ ಇವರ ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, ಐದು ಲಕ್ಷ ರೂ. ವರದಕ್ಷಿಣೆಯಾಗಿ ತೆಗೆದುಕೊಂಡಿದ್ದರೆ ಎಂಬ ಆರೋಪ ಕೇಳಿಬರುತ್ತಿದೆ.
ಇನ್ನು ಲೋಕೇಶ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.