ಯುವತಿಯೊಬ್ಬಳು ಮದುವೆ ಮಂಟಪಕ್ಕೆ ನುಗ್ಗಿ ಮಾಜಿ ಪ್ರಿಯಕರನ ಮುಖಕ್ಕೆ ಯುವತಿಯೊಬ್ಬಳು ಆ್ಯಸಿಡ್(Acid) ಎರಚಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಛತ್ತೀಸಗಢದ ಬಸ್ತಾರ್ ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಾಜಿ ಪ್ರಿಯಕರ ಮದುವೆಯಾಗುತ್ತಿದ್ದಾನೆ ಎಂದು ತಿಳಿದ ಯುವತಿ, ಮದುವೆ ಮಂಟಪಕ್ಕೆ ನುಗ್ಗಿ ಆತನ ಮೇಲೆ ಆ್ಯಸಿಡ್ ಎರಚಿದ್ದಾಳೆ. ಆ್ಯಸಿಡ್ ದಾಳಿಯಲ್ಲಿ ವರ, ವಧು ಹಾಗೂ 10 ಜನ ವಿವಾಹ ಅತಿಥಿಗಳಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಈ ಘಟನೆ ಏಪ್ರಿಲ್ 19ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಅಳವಡಿಸಿದ್ದ ಸಿಸಿಟಿವಿ ಉಪಯೋಗಿಸಿ ಪೊಲೀಸರು, ವೇಷ ಬದಲಾಯಿಸಿ, ಪುರುಷ ವೇಷ ಧರಿಸಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯು, ಹಲವು ವರ್ಷಗಳಿಂದ ದಮೃಧರ್ ಬಘೇಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಮದುವೆಯಾಗುವ ಭರವಸೆ ನೀಡಿದ್ದ. ಆದರೆ, ಈಗ ಬೇರೆ ಮದುವೆಯಾಗುತ್ತಿದ್ದಾನೆ ಎಂದು ಪೊಲೀಸರಿಗೆ ಹೇಳಿದ್ದಾರೆ.
ಮೋಸ ಮಾಡಿದ್ದಾನೆ ಎನ್ನುವ ಕೋಪದಲ್ಲಿ ಆ್ಯಸಿಡ್ ಎರಚಿದ್ದಳು. ಅವನ ಮದುವೆ ನಿಶ್ಚಯವಾದ ತಕ್ಷಣೆ ಆಕೆ ಆತನಿಗೆ ಕರೆ ಮಾಡಿದ್ದಾಳೆ. ಆದರೆ ಯಾವುದಕ್ಕೂ ಪ್ರತಿಕ್ರಿಯೆ ಇರಲಿಲ್ಲ. ಬಳಿಕ ಆ್ಯಸಿಡ್ ದಾಳಿ ಮಾಡಿ ಸೇಡು ತೀರಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಿದೆ ಎಂದಿದ್ದಾಳೆ.
ಮೆಣಸಿನಕಾಯಿ ಫಾರ್ಮ್ ನಿಂದ ಆ್ಯಸಿಡ್ ಕದಿದ್ದಳು ಎಂದು ಬಸ್ತಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಪಾಲ್ ಹೇಳಿದ್ದಾರೆ.