ತೈಲ ಬೆಲೆ ಏರಿಕೆ.. #TheKashmiriFiles | ಬಿಜೆಪಿ ವರ್ಸಸ್ ಕಾಂಗ್ರೆಸ್ ಟ್ವೀಟ್ ವಾರ್
ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮತ್ತು ದಿ ಕಾಶ್ಮೀರಿ ಫೈಲ್ಸ್ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ವಾರ್ ಮುಂದುವರೆದಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಸಿಎಂ ಬೊಮ್ಮಾಯಿಯವರೇ.. ಕಾಶ್ಮೀರ್ ಫೈಲ್ಸ್ ಚಲನಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ಕೊಟ್ಟಿದ್ದಿರಿ. ಆದೇ ರೀತಿ ಇಂಧನತೈಲಗಳಿಗೆ ತೆರಿಗೆ ಕಡಿತಗೊಳಿಸುವುದು ಯಾವಾಗ? ಸಿನಿಮಾ ತೋರಿಸುವ ಬದಲು, ಬದುಕುವ ದಾರಿ ತೋರಿಸಿ ಎಂದು ಕುಟುಕಿದೆ.
ಅಲ್ಲದೇ ತೈಲ ಕಂಅಪೆನಿಗಳು ಸಮರ್ಪಕವಾಗಿ ಇಂಧನ ಪೂರೈಕೆ ಮಾಡಲು ಹಿಂದೇಟು ಹಾಕುತ್ತಿರುವುದೇಕೆ? ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕೃತಕ ಅಭಾವ ಸೃಷ್ಟಿಸುತ್ತಿವೆ ಇಂಧನ ಕಂಪೆನಿಗಳು, ಆದರೆ ಸರ್ಕಾರ ಮಾತ್ರ ಕ್ರಮ ಕೈಗೊಳ್ಳದೆ ಕಂಪೆನಿಗಳ ಸಹಕಾರಕ್ಕೆ ನಿಂತಿದೆ. ಇಂಧನ ಕಂಪೆನಿಗಳ ಖಾಸಗೀಕರಣ, ಏಕಸ್ವಾಮ್ಯತೆಯಿಂದಾಗಿ ಮುಂದೆ ಏನೇನು ಅವಾಂತರ ಸೃಷ್ಟಿಯಾಗುತ್ತದೆಯೋ.! ಎಂದು ಅನುಮಾನ ವ್ಯಕ್ತಪಡಿಸಿದೆ.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಮರೆವಿನ ಕಾಯಿಲೆ ಇದೆಯೋ ಅಥವಾ ಜನರನ್ನು ತಪ್ಪು ದಾರಿಗೆ ಎಳೆಯುವ ಜಾಣ ಮರೆವೋ? ನಮ್ಮ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಬೆಲೆಯನ್ನು ಇಳಿಸಿದ್ದು ಇಷ್ಟು ಬೇಗ ಮರೆತು ಹೋಯಿತೇ? ಸುಳ್ಳೇ ಕಾಂಗ್ರೆಸ್ ಪಕ್ಷದ ಮನೆ ದೇವರು ಎನ್ನುವುದಕ್ಕೆ ಇದಕ್ಕಿಂತ ಬೇರೆ ದೃಷ್ಟಾಂತ ಬೇಕೆ! ಎಂದು ಪ್ರಶ್ನಿಸಿದೆ.
ರಾಜ್ಯ ಸರ್ಕಾರ #TheKashmiriFiles ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿರುವುದಕ್ಕೆ #ಹಿಂದೂವಿರೋಧಿಕಾಂಗ್ರೆಸ್ ಅಧಿಕೃತವಾಗಿ ವಿರೋಧಿಸಿದೆ. ಇದರ್ಥ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡವನ್ನು ಕಾಂಗ್ರೆಸ್ ಬೆಂಬಲಿಸಿದಂತಲ್ಲವೇ? ಅಸಂಖ್ಯಾತ ಹಿಂದೂಗಳ ಬದುಕು ಕಸಿದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಬದುಕಿನ ಪಾಠ ಮಾಡಲು ನೈತಿಕತೆ ಇದೆಯೇ ಎಂದು ಕುಟುಕಿದೆ. thekashmirifiles-karnataka bjp vs congress tweet war