ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೇಮಲೋಕ 2 ಚಿತ್ರ ನಿರ್ಮಾಣ ಮಾಡುವುದಾಗಿ ಇತ್ತೀಚೆಗೆ ಹೇಳಿದ್ದರು. ಸದ್ಯ ಈ ಚಿತ್ರಕ್ಕೆ ಯಾರು ನಾಯಕಿ ಆಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ಪ್ರೇಮಲೋಕ ಮೊದಲ ಚಿತ್ರದಲ್ಲಿ ಬಾಲಿವುಡ್ ನ ಜೂಹಿ ಚಾವ್ಲಾ ನಟಿಸಿದ್ದರು. ಆದರೆ, 2ನೇ ಭಾಗಕ್ಕೆ ತಮಿಳು ನಟಿ ತೇಜು ಅಶ್ವಿನಿ (Teju Ashwini) ಈ ಸಿನಿಮಾದ ನಾಯಕಿ ಎಂಬ ಮಾತು ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ಪುತ್ರರು ನಟಿಸುತ್ತಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ರವಿಚಂದ್ರನ್ (Ravichandran) ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ಈ ಚಿತ್ರವನ್ನು ಕ್ರೇಜಿಸ್ಟಾರ್ ನಿರ್ದೇಶಿಸಿ, ನಟಿಸಿದ್ದರು. ಅದು ಭರ್ಜರಿಯಾಗಿ ಗೆದ್ದಿತ್ತು. ಸದ್ಯ 2ನೇ ಭಾಗದ ಚಿತ್ರೀಕರಣ ಮೇ 30ರಿಂದ ಆರಂಭವಾಗಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಇತ್ತೀಚೆಗಷ್ಟೇ ರವಿಚಂದ್ರನ್ ಈ ಚಿತ್ರದ ಕುರಿತು ಅಪ್ಡೇಟ್ ನೀಡಿದ್ದು, ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸುತ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರದಲ್ಲಿ ನಟಿಸುತ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದರು. ಈ ಚಿತ್ರದಲ್ಲಿ ಸುಮಾರು 20 ರಿಂದ 25 ಹಾಡುಗಳು ಇವೆ ಎಂದು ಕೂಡ ಹೇಳಿದ್ದರು. ಹೀಗಾಗಿ ಸಿನಿ ರಸಿಕರು ಚಿತ್ರಕ್ಕಾಗಿ ಕಾಯುತ್ತಿದ್ದಾರೆ.