ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರೀತಿಸುವವರು ಪಾಕಿಸ್ತಾನದಲ್ಲಿಯೂ ಇದ್ದಾರೆ ಎಂದು ಗಾಯಕ ಅನೂಪ್ ಜಲೋಟಾ (Anup Jalota) ಹೇಳಿದ್ದಾರೆ.
ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಮಾತನಾಡಿದ ಗಾಯಕ, ನೆರೆಯ ದೇಶದಲ್ಲಿ ಕೂಡ ಪ್ರಧಾನಿ ಮೋದಿ ಅವರಂತಹ ನಾಯಕನನ್ನು ಬಯಸುತ್ತೇವೆ ಎಂದು ಪಾಕಿಸ್ತಾನ (Pakistan) ದ ಜನ ಹೇಳುತ್ತಾರೆ ಎಂದು ಹಾಡಿ ಹೊಗಳಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಪ್ರೀತಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಕಿಸ್ತಾನವೇ ಮೋದಿಯವರನ್ನು ಪ್ರೀತಿಸುತ್ತಿದೆ ಎಂದೇ ಹೇಳಬಹುದು. ಮೋದಿ ಅವರಂತಹ ನಾಯಕ ನಮಗೆ ಬೇಕು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಇತ್ತ ಸಿಡ್ನಿಯ ಜನ ಕೂಡ ಮೋದಿಯವರು ಶಾಶ್ವತವಾಗಿ ಪ್ರಧಾನಿಯಾಗಿರುವಂತೆ ಬಯಸುತ್ತಾರೆ ಎಂದು ಹೇಳಿದ್ದಾರೆ.