ನವದೆಹಲಿ : ಕೊರೊನಾ ವೈರಸ್ ಸೋಂಕನ್ನು ಹತ್ತಿಕ್ಕಲು ಮೋದಿ ಸರ್ಕಾರ ಲಾಕ್ ಡೌನ್ 3.0 ಅನ್ನು ಪ್ರಾರಂಭಿಸಿದೆ. ಮೇ.17 ರವರೆಗಿನ ಲಾಕ್ ಡೌನ್ 3.0 ಮಾರ್ಗಸೂಚಿ ಬಿಡುಗಡೆ ಆಗಿದ್ದು, ಹಲವು ಗೊಂದಲಗಳಿಗೆ ಕಾರಣವಾಗಿದೆ. ರೆಡ್ ಝೋನ್, ಆರೆಂಜ್ ಝೋನ್ ಮತ್ತು ಗ್ರೀನ್ ಝೋನ್ ಗಳಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದ್ದು, ಕೆಲವು ವಿನಾಯಿತಿಗಳು ಹಸಿರು ಮತ್ತು ಕಿತ್ತಳೆ ವಲಯಗಳಿಗೆ ಮಾತ್ರ ಸೀಮಿತವಾಗಿದೆ.
ಯಾವ ಝೋನ್ ನಲ್ಲಿ ಯಾವುದಕ್ಕೆ ವಿನಾಯಿತಿ ಇದೆ ಎಂಬ ಗೊಂದಲ ಇದ್ದರೆ, ಸಿಂಪಲ್ ಮಾಹಿತಿ ಇಲ್ಲಿದೆ
ಯಾವ ವಲಯದಲ್ಲೂ ಇವುಗಳಿಗೆ ವಿನಾಯಿತಿ ಇಲ್ಲ.!
* ವಿಮಾನ, ರೈಲು, ಮೆಟ್ರೋ.
* ಅಂತರಾಜ್ಯ ರಸ್ತೆ ಸಾರಿಗೆ.
* ಎಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು.
* ಶಾಪಿಂಗ್ ಮಾಲ್, ಸಿನಿಮಾ ಹಾಲ್, ಹೋಟೆಲ್.
* ದೇವಸ್ಥಾನ, ಪ್ರಾರ್ಥನಾ ಮಂದಿರಗಳು, ಜಾತ್ರೆ.
* ರಾತ್ರಿ 7 ರಿಂದ ಬೆಳಗ್ಗೆ 7 ರವರೆಗೆ ಸಂಚಾರಕ್ಕೆ ನಿರ್ಬಂಧ.
* 65 ವರ್ಷಕ್ಕಿಂತ ಮೇಲ್ಪಟ್ಟವರು, 10 ವರ್ಷ ವಯಸ್ಸಿನೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಹೊರಗೆ ಬರುವಂತಿಲ್ಲ.
ಹಸಿರು ಮತ್ತು ಆರೆಂಜ್ ವಲಯದಲ್ಲಿ ಯಾವುದಕ್ಕೆ ವಿನಾಯಿತಿ?
* ಸಲೂನ್, ಬ್ಯೂಟಿ ಪಾರ್ಲರ್, ಸ್ಪಾ.
* ಮೆಡಿಕಲ್ ಕ್ಲಿನಿಕ್, ಒಪಿಡಿ.
* ಈ-ಕಾಮರ್ಸ್.
* ಸೀಮಿತ ಸಿಬ್ಬಂದಿಯೊಂದಿಗೆ ಕೃಷಿ, ಕೈಗಾರಿಕೆ.
* ಬ್ಯಾಂಕ್ ಚಟುವಟಿಕೆ.
* ಕೊರಿಯರ್ ಮತ್ತು ಪೋಸ್ಟ್.
* ಸರಕು ಸಾಗಣೆ.
ಕಂಟೇನ್ಮೆಂಟ್ ಝೋನ್ ನಲ್ಲಿ ಯಾವುದಕ್ಕೂ ವಿನಾಯಿತಿ ಇಲ್ಲ.!
ಕೊರೊನಾ ಸೋಂಕಿತರನ್ನು ಹೊಂದಿರುವ ಕಂಟೇನ್ಮೆ0ಟ್ ಝೋನ್ ಗಳಲ್ಲಿ ಯಾವುದೇ ಚಟುವಟಿಕೆಗಳಿಗೂ ವಿನಾಯಿತಿ ಇಲ್ಲ. ಇಲ್ಲಿ ಲಾಕ್ ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಮುಂದುವರೆಯಲಿದೆ.