ADVERTISEMENT
Saturday, January 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನನ್ನನ್ನು ಪ್ರಿಯಾಂಕಾ ಎನ್ನುತ್ತಾ ಲಿಂಗವನ್ನೇ ಬದಲಿಸಿದ್ದಾರೆ: ವಿಧಾನಸಭೆಯನ್ನು ನಗೆಗಡಲಲ್ಲಿ ತೇಲಿಸಿದ ಸಚಿವ ಪ್ರಿಯಾಂಕ್ ಖರ್ಗೆ

They changed my gender by calling me Priyanka: Minister Priyank Kharge makes the assembly laugh

Shwetha by Shwetha
December 11, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ವಿಧಾನಸಭೆಯ ಕಲಾಪ ಅಂದರೆ ಸಾಮಾನ್ಯವಾಗಿ ಗಂಭೀರ ಚರ್ಚೆ, ಆರೋಪ-ಪ್ರತ್ಯಾರೋಪ, ಏರಿದ ದನಿ ಮತ್ತು ಪ್ರತಿಭಟನೆಗಳು ಸಾಮಾನ್ಯ. ಆದರೆ ಬುಧವಾರದ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ಇದಕ್ಕೆ ತದ್ವಿರುದ್ಧವಾಗಿತ್ತು. ಹೆಸರಿನ ಉಚ್ಚಾರಣೆಯಲ್ಲಿ ಆದ ಸಣ್ಣ ಎಡವಟ್ಟು ಸದನದಲ್ಲಿ ನಗೆಯ ಅಲೆ ಎಬ್ಬಿಸಿತು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹೆಸರಿನ ಕುರಿತು ನೀಡಿದ ಸ್ವಾರಸ್ಯಕರ ಹೇಳಿಕೆ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು.

ಹೆಸರು ಬದಲಾವಣೆ ಮತ್ತು ಗೊಂದಲದ ಕುರಿತು ಮಾತನಾಡುತ್ತಾ, ಹೆಸರು ಬದಲಾದರೆ ಏನಾಗುತ್ತದೆ ಎನ್ನುವುದಕ್ಕೆ ನನಗಿಂತ ಬೇರೆ ಉದಾಹರಣೆಯೇ ಇಲ್ಲ. ನನ್ನ ಹೆಸರು ಪ್ರಿಯಾಂಕ್ ಖರ್ಗೆ. ಆದರೆ, ಹಲವರು ಪ್ರಿಯಾಂಕಾ.. ಪ್ರಿಯಾಂಕಾ.. ಎಂದು ಕರೆಯುವ ಮೂಲಕ ನನ್ನ ಲಿಂಗವನ್ನೇ ಬದಲು ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಾಸ್ಯಮಯವಾಗಿ ಹೇಳುವ ಮೂಲಕ ಸದನದ ಒತ್ತಡದ ವಾತಾವರಣವನ್ನು ತಿಳಿಗೊಳಿಸಿದರು.

Related posts

ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ

ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ

January 24, 2026
ಟ್ರಂಪ್ ಕೋಪಕ್ಕೆ ಗುರಿಯಾದ ಕೆನಡಾ: ಶಾಂತಿ ಮಂಡಳಿ ಆಹ್ವಾನ ವಾಪಸ್

ಟ್ರಂಪ್ ಕೋಪಕ್ಕೆ ಗುರಿಯಾದ ಕೆನಡಾ: ಶಾಂತಿ ಮಂಡಳಿ ಆಹ್ವಾನ ವಾಪಸ್

January 24, 2026

ತಿಮ್ಮಯ್ಯ ವರ್ಸಸ್ ತಮ್ಮಯ್ಯ ಪ್ರಸಂಗ

ಈ ಹಾಸ್ಯ ಪ್ರಸಂಗಕ್ಕೆ ಕಾರಣವಾಗಿದ್ದು ಆಡಳಿತ ಪಕ್ಷದ ಸದಸ್ಯ ತಮ್ಮಯ್ಯ ಎಚ್.ಡಿ. ಅವರ ಹೆಸರು. ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯ ತಮ್ಮಯ್ಯ ಅವರನ್ನು ಅಚಾತುರ್ಯದಿಂದ ತಿಮ್ಮಯ್ಯ ಎಂದು ಸಂಭೋದಿಸಿದರು.

ಇದಕ್ಕೆ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ತಮ್ಮಯ್ಯ, ಮಾನ್ಯ ಸ್ಪೀಕರ್ ಅವರೇ, ನನ್ನ ಹೆಸರನ್ನು ತಾವು ಒಮ್ಮೆ ತಿಮ್ಮಯ್ಯ ಎಂದು ಕರೆದ ಪರಿಣಾಮ, ಈಗ ಎಲ್ಲರೂ ನನ್ನನ್ನು ತಿಮ್ಮಯ್ಯ ಎಂದೇ ಕರೆಯುತ್ತಿದ್ದಾರೆ. ಇದರಿಂದಾಗಿ ನನ್ನ ಹೆಸರೇ ಬದಲಾದಂತಾಗಿದೆ ಎಂದು ಸಭಾಧ್ಯಕ್ಷರ ಗಮನ ಸೆಳೆದರು.

ಹೆಸರು ತಪ್ಪಾಗಿ ಕರೆದರೆ ದಂಡ ಗ್ಯಾರಂಟಿ

ಶಾಸಕ ತಮ್ಮಯ್ಯ ಅವರ ಅಳಲಿಗೆ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ಸದಸ್ಯರ ಹೆಸರನ್ನು ತಪ್ಪಾಗಿ ಕರೆಯುವುದು ಸರಿಯಲ್ಲ. ನಿಮ್ಮ ಹೆಸರು ತಮ್ಮಯ್ಯ ಎಂದು ಕಡತದಲ್ಲಿದೆ. ಹೀಗಾಗಿ ಸದನದ ಕಲಾಪದಲ್ಲಿ ಇನ್ನು ಮುಂದೆ ಸದಸ್ಯರ ಹೆಸರನ್ನು ಯಾರೂ ತಪ್ಪಾಗಿ ಕರೆಯಬಾರದು. ಒಂದು ವೇಳೆ ಯಾರಾದರೂ ತಪ್ಪಾಗಿ ಹೆಸರು ಕರೆದರೆ ಅವರಿಗೆ ಸ್ಥಳದಲ್ಲೇ ದಂಡವನ್ನು ವಿಧಿಸಲಾಗುವುದು ಎಂದು ಚಟಾಕಿ ಹಾರಿಸಿದರು. ಸ್ಪೀಕರ್ ಅವರ ಈ ರೂಲಿಂಗ್ ಸದನದಲ್ಲಿ ನಗೆಯುಕ್ಕಿಸಿತು.

ನನ್ನ ಲಿಂಗವನ್ನೇ ಬದಲಿಸಿದ್ದಾರೆ ಎಂದ ಖರ್ಗೆ

ಸ್ಪೀಕರ್ ಅವರ ಮಾತಿನ ಬೆನ್ನಲ್ಲೇ ಉತ್ತರಿಸಲು ಎದ್ದುನಿಂತ ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯರ ಹೆಸರನ್ನು ತಪ್ಪಾಗಿ ಕರೆದಿದ್ದಕ್ಕೆ ಕ್ಷಮೆ ಕೋರಿದರು. ಬಳಿಕ ತಮ್ಮದೇ ಉದಾಹರಣೆಯನ್ನು ನೀಡುತ್ತಾ, ಹೆಸರು ತಪ್ಪಾದರೆ ಆಗುವ ಅನಾಹುತಕ್ಕೆ ನಾನೇ ದೊಡ್ಡ ಸಾಕ್ಷಿ. ನನ್ನ ಹೆಸರು ಪ್ರಿಯಾಂಕ್ ಖರ್ಗೆ. ಆದರೆ ಸಾರ್ವಜನಿಕವಾಗಿ ಮತ್ತು ಕೆಲವೊಮ್ಮೆ ಮಾಧ್ಯಮಗಳಲ್ಲಿ ನನ್ನನ್ನು ಪ್ರಿಯಾಂಕಾ ಎಂದು ಕರೆಯುತ್ತಾರೆ. ಈ ಮೂಲಕ ನನ್ನ ಹೆಸರನ್ನು ಮಾತ್ರವಲ್ಲ, ನನ್ನ ಲಿಂಗವನ್ನೇ ಬದಲಾಯಿಸಿ ಬಿಟ್ಟಿದ್ದಾರೆ ಎಂದು ಮಸಾಲೆ ಬೆರೆಸಿ ಹೇಳಿದರು. ಸಚಿವರ ಈ ಮಾತುಗಳನ್ನು ಕೇಳಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಟ್ಟಾಗಿ ನಗಲಾರಂಭಿಸಿದರು.

ಹಾಸ್ಯದ ಬಳಿಕ ವಿಷಯಕ್ಕೆ ಮರಳಿದ ಶಾಸಕರು, ಸಚಿವರ ಉತ್ತರಕ್ಕೆ ತೃಪ್ತಿ ವ್ಯಕ್ತಪಡಿಸುತ್ತಾ ಸಮರ್ಥ ಮಂತ್ರಿ ಎಂದು ಮೆಚ್ಚುಗೆ ಸೂಚಿಸಿದರು. ಆದರೆ ವಾಕ್ಯದ ಕೊನೆಯಲ್ಲಿ ಆದರೆ.. ಎಂದು ಸೇರಿಸಿದರು. ಇದನ್ನು ತಕ್ಷಣವೇ ಗಮನಿಸಿದ ಸಚಿವ ಖರ್ಗೆ, ಸಮರ್ಥ ಎಂದು ಹೇಳಿದ ನಂತರ ಈ ಆದರೆ ಎಂಬ ಪ್ರಶ್ನೆ ಏಕೆ? ಏನೇ ಆದರೂ ಸರಕಾರ ಸದಸ್ಯರ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡಿದೆ ಎಂದು ಚುರುಕಾಗಿ ಉತ್ತರಿಸಿದರು.

ಬುಧವಾರದ ಕಲಾಪವು ಗಂಭೀರ ವಿಷಯಗಳ ನಡುವೆಯೂ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸ್ಪೀಕರ್ ಖಾದರ್ ಅವರ ಸಮಯಪ್ರಜ್ಞೆಯಿಂದ ಕೂಡಿದ ಹಾಸ್ಯಕ್ಕೆ ಸಾಕ್ಷಿಯಾಯಿತು.

ShareTweetSendShare
Join us on:

Related Posts

ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ

ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ

by Shwetha
January 24, 2026
0

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಾಂವಿಧಾನಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ವಿಧಾನಮಂಡಲ ವಿಶೇಷ ಅಧಿವೇಶನದ ಎರಡನೇ ದಿನದ ಕಲಾಪದ ವೇಳೆ, ರಾಜ್ಯಪಾಲರ ಭಾಷಣ ವಿಷಯವೇ...

ಟ್ರಂಪ್ ಕೋಪಕ್ಕೆ ಗುರಿಯಾದ ಕೆನಡಾ: ಶಾಂತಿ ಮಂಡಳಿ ಆಹ್ವಾನ ವಾಪಸ್

ಟ್ರಂಪ್ ಕೋಪಕ್ಕೆ ಗುರಿಯಾದ ಕೆನಡಾ: ಶಾಂತಿ ಮಂಡಳಿ ಆಹ್ವಾನ ವಾಪಸ್

by Shwetha
January 24, 2026
0

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋಪಕ್ಕೆ ಕೆನಡಾ ಗುರಿಯಾಗಿದೆ. ಗಾಜಾ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ರೂಪಿಸಲಾಗಿರುವ ಅಂತರರಾಷ್ಟ್ರೀಯ ಶಾಂತಿ ಮಂಡಳಿಗೆ ಸೇರಿಕೊಳ್ಳುವಂತೆ ಕೆನಡಾಕ್ಕೆ...

‘G RAM G’ ಕಾಯ್ದೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ

‘G RAM G’ ಕಾಯ್ದೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ

by Shwetha
January 24, 2026
0

‘VB–G RAM G’ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಪಟ್ಟಿಗೆ ಇದೀಗ ತಮಿಳುನಾಡು ಕೂಡ ಸೇರ್ಪಡೆಯಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ನಿರ್ಣಯವನ್ನು...

Lamp Characteristics: What should a god's lamp look like inside the house?

ದೀಪ ಲಕ್ಷಣ: ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

by admin
January 24, 2026
0

ದೀಪ ಲಕ್ಷಣ: ಮನೆಯೊಳಗೆ ದೇವರ ದೀಪ ಹೇಗಿರ ಬೇಕು? ಇದೊಂದು ಮಹಾ ಜಿಜ್ಞಾಸೆಯ ವಿಷಯ ಆಗಿದೆ. ಒಬ್ಬೊಬ್ಬರು ಒಂದೊಂದು ತರಹ ಹೇಳಿ ತಲೆ ಕೆಡಿಸಿ ಬಿಡುತ್ತಾರೆ. ನಿಜವಾದ...

ಉದ್ಯೋಗಾಂಕ್ಷಿಗಳಿಗೆ ಹಬ್ಬವೋ ಹಬ್ಬ: ಇನ್ಫೋಸಿಸ್ ನಲ್ಲಿ ಖಾಲಿ ಇವೆ 20,000 ಹುದ್ದೆಗಳು

ಉದ್ಯೋಗಾಂಕ್ಷಿಗಳಿಗೆ ಹಬ್ಬವೋ ಹಬ್ಬ: ಇನ್ಫೋಸಿಸ್ ನಲ್ಲಿ ಖಾಲಿ ಇವೆ 20,000 ಹುದ್ದೆಗಳು

by Shwetha
January 24, 2026
0

ಬೆಂಗಳೂರು: ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅಬ್ಬರಕ್ಕೆ ಸಿಲುಕಿ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಭೀತಿ ಎದುರಾಗಿರುವಾಗಲೇ, ಭಾರತದ ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram