ವ್ಯಾಪಕ ಮಂಜಿನಿಂದಾಗಿ ಕಡಿಮೆ ಗೋಚರತೆ ಇರುವ ಕಾರಣ ಉತ್ತರ ಭಾರತದಾದ್ಯಂತ ಎಲ್ಲ ವಿಮಾನಗಳು ತಡವಾಗಿ ಸಂಚರಿಸುವ ಅನಿವಾರ್ಯತೆ ಎದುರಿಸಿವೆ. ಈ ಸಂದರ್ಭದಲ್ಲಿ 7ಕ್ಕೂ ಅಧಿಕ ಗಂಟೆಗಳ ಕಾಲ ತಡವಾಗಿ ಹೋಗುತ್ತಿದ್ದಕ್ಕೆ ಕೋಪಗೊಂಡ ಪ್ರಯಾಣಿಕ ಪೈಲಟ್ನನ್ನು ಥಳಿಸಿರುವ ಘಟನೆ ನಡೆದಿದೆ.
ಈ ಘಟನೆ ದೆಹಲಿ ಏರ್ಪೋರ್ಟ್ ನಲ್ಲಿ ವರದಿಯಾಗಿದೆ. ಇನ್ನೊಂದು ಪ್ರಕರಣದಲ್ಲಿ ವಿಮಾನವು ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಡಬೇಕಿತ್ತು, 7 ಗಂಟೆಗಳ ಕಾಲ ತಡವಾಯಿತು. ಇಂಡಿಗೋ ವಿಮಾನ 7 ಗಂಟೆಗಳ ತಡವಾಗಿ ಹೊರಟಿದ್ದಕ್ಕೆ ನಾನು ಅಂತಾರಾಷ್ಟ್ರೀಯ ವಿಮಾನವನ್ನು ಮಿಸ್ ಮಾಡಿಕೊಂಡಿದ್ದೇನೆ ಎಂದು ದೇಬರ್ಘ್ಯದಾಸ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇಂಡಿಗೋ ಸಂಸ್ಥೆಯ ತಪ್ಪಿನಿಂದ ಇದು ನಡೆದರೂ ಕೂಡ ಮತ್ತೊಂದು ಟಿಕೆಟ್ ಕಾಯ್ದಿರಿಸಲು ಯಾವುದೇ ಸಹಾಯ ಮಾಡಿಲ್ಲ ಎಂದು ದಾಸ್ ಹೇಳಿದ್ದಾರೆ. ಸಾಮಾನು ಹಿಂದಿರುಗಿಸಲು ಸುಮಾರು 2 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ. ನಂತರ ಇಂಡಿಗೋ ಪೋಸ್ಟ್ ಮಾಡಿದ್ದು, ನಿಮ್ಮ ಹಣವನ್ನು ಹಿಂದಿರುಗಿಸಿದ್ದೇವೆ ಒಂದು ವಾರದಲ್ಲಿ ನಿಮ್ಮ ಖಾತೆಗೆ ಬರಲಿದೆ ನಮ್ಮ ತಪ್ಪಿಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಬರೆದಿದೆ.