ಹ್ಯಾಶಿಲ್ ಆಯಿಲ್ ನ್ನು ಸಾಗಿಸುತ್ತಿದ್ದ ಆರೋಪಿಗಳ ಬಂಧನ
ಬೆಂಗಳೂರು: ಹ್ಯಾಶಿಶ್ ಆಯಿಲ್ ನ್ನು ಲಖನೌ ಟು ಬೆಂಗಳೂರಿಗೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಎನ್.ಸಿ.ಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳು ಉತ್ತರ ಪ್ರದೇಶದ ಮೂಲದವರಾಗಿದ್ದು, ಇವರು ಲಖನೌ ದಿಂದ ಬೆಂಗಳೂರಿಗೆ ಹ್ಯಾಶಿಶ್ ಆಯಿಲ್ ನ್ನು ರೈಲಿನ ಮುಖಾಂತರ ಸಾಗಿಸುತ್ತಿದ್ದರು. ಇವರನ್ನು ಎನ್.ಸಿ.ಬಿ ಅಧಿಕಾರಿಗಳು ಯಶವಂತಪುರ ರೇಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತರು ನೇಪಾಳ ಮೂಲದ ವ್ಯಕ್ತಿಯಿಂದ ಹ್ಯಾಶಿಶ್ ಆಯಿಲ್ ಖರೀದಿಸಿ ಬಳಿಕ ಬ್ಯಾಗಿನಲ್ಲಿ ಬಟ್ಟೆಗಳ ನಡುವೆ ಅಡಗಿಸಿಟ್ಟು ಬೆಂಗಳೂರಿಗೆ ಸಾಗಿಸುತ್ತಿದ್ದರು. ಬಂಧಿತರಿಂದ 3.167 ಕೆ.ಜಿ ಹ್ಯಾಶಿಶ್ ಆಯಿಲ್ ಅನ್ನು ಜಪ್ತಿ ಮಾಡಲಾಗಿದ್ದು, ಅವರು ನೀಡಿದ ಮಾಹಿತಿಯನ್ವಯ ಹ್ಯಾಶಿಶ್ ಆಯಿಲ್ ರಿಸೀವ್ ಮಾಡಿಕೊಳ್ಳಲು ಕಾಯುತ್ತಿದ್ದ ಬೆಂಗಳೂರು ಮೂಲದ ಮತ್ತೋರ್ವ ಆರೋಪಿಯನ್ನು ಸಹ ಬಂಧಿಸಲಾಗಿದೆ.