ಸ್ನೇಹಿತನ ಜೊತೆಗೆ ಮಣ್ಣಲ್ಲಿ ಮಣ್ಣಾದ ಸ್ನೇಹಿತರು
ಯಾದಗಿರಿ : ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗುರು ಗ್ರಾಮದ ಗೊಲ್ಲಪಲ್ಲಿ ಬಳಿ ನಡೆದಿದೆ.
ಅಂಬರೀಶ್ (27), ದೇವಿಂದ್ರಪ್ಪ (26) ಹಾಗೂ ಗೋವಿಂದ (24) ಮೃತ ದುರ್ದೈವಿಗಳು. ಈ ಮೂವರು ಸ್ನೇಹಿತರಾಗಿದ್ದು, ವಡೇಗರಾ ತಾಲೂಕಿನ ನಿವಾಸಿಗಳಾಗಿದ್ದಾರೆ.
ನಡೆದಿದ್ದೇನು?: ಟಿ ವಡಗೇರಾ ಗ್ರಾಮದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮದ ಬಸಯ್ಯ ಸ್ವಾಮಿ(ಸ್ನೇಹಿತ) ಎಂಬುವರು ಮೃತಪಟ್ಟಿದ್ದರು. ಮೃತ ಬಸಯ್ಯಸ್ವಾಮಿ ಅವರ ಅಂತ್ಯಕ್ರಿಯೆ ಟಿ. ವಡಗೇರಾ ಗ್ರಾಮದಲ್ಲಿ ನೆರವೇರಿಸಲಾಗುತ್ತಿತ್ತು. ಈ ಹಿನ್ನೆಲೆ ಸ್ನೇಹಿತನ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗಲು ಐದು ಜನ ಸ್ನೇಹಿತರು ಬೆಂಗಳೂರನಿಂದ ಕಾರಿನಲ್ಲಿ ಬರುತ್ತಿದ್ದರು.
ಈ ವೇಳೆ ದುರ್ಘಟನೆ ಜರುಗಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.