ಪೋಷಕರು ಪದೇ ಪದೇ ಜಗಳ ಮಾಡುತ್ತಿರುವುದಕ್ಕೆ ಬೇಸತ್ತ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ನಡೆದಿದೆ.
ಸ್ಥಳೀಯ ಕಾರ್ಪೊರೇಟರ್ ಅಸೀಮ್ ರಜಾ ಎಂಬುವವರ ಪುತ್ರಿಯರಾದ ಕಾಶಿಶ್ (20) ಮತ್ತು ಆಕೆಯ ಸಹೋದರಿ ಮುನ್ನಿ (18) ವಿಷ ಸೇವಿಸಿದ ದುರ್ದೈವ ಸಹೋದರಿಯರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಚಿಕಿತ್ಸೆ ನೀಡುವ ವೇಳೆ ಸಾವನ್ನಪ್ಪಿದ್ದಾರೆ ಎಂದು ವಲಯದ ಅಧಿಕಾರಿ ಅಲೋಕ್ ಸಿಂಗ್ ಹೇಳಿದ್ದಾರೆ. ಪದೇ ಪದೇ ಜಗಳವಾಡುತ್ತಿದ್ದರಿಂದಾಗಿ ಪುತ್ರಿಯರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.