ಧರ್ಮಸ್ಥಳದಲ್ಲಿ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್, “ಶ್ರೀ ಸಾನಿಧ್ಯ”, ಭಕ್ತರಿಗೆ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಲು ನಿರ್ಮಿಸಲಾಗಿದೆ. ಇದರ ವಿಶೇಷತೆಗಳು ಹೀಗಿವೆ ನೋಡಿ.
– ವಿಶಾಲ ಸಂಕೀರ್ಣ: 2,75,177 ಚದರ ಅಡಿಯಲ್ಲಿ ನಿರ್ಮಾಣಗೊಂಡಿದೆ.
– ಆಧುನಿಕ ತಂತ್ರಜ್ಞಾನ: ಎಐ ಆಧಾರಿತ ಕ್ಯಾಮೆರಾ ವ್ಯವಸ್ಥೆ, ಡಿಜಿಟಲ್ ಸೂಚನಾ ಫಲಕಗಳು.
– ಸೌಲಭ್ಯಗಳು: 16 ಭವನಗಳಲ್ಲಿ ಏಕಕಾಲದಲ್ಲಿ 600 ಜನ ಭಕ್ತರು ವಿಶ್ರಾಂತಿ ಪಡೆಯಬಹುದು.ಹವಾನಿಯಂತ್ರಿತ ಕೊಠಡಿಗಳು, ಸ್ಟೇನ್ಲೆಸ್ ಸ್ಟೀಲ್ ಕುರ್ಚಿಗಳು, ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ.
– ಮಕ್ಕಳ ಆರೈಕೆ: ಮಕ್ಕಳ ಆರೈಕೆ ಕೊಠಡಿ.
– ಸೇವಾ ರಶೀದಿ ಕೌಂಟರ್: ಪ್ರತಿ ಭವನದ ದ್ವಾರದಲ್ಲಿ ಸೇವಾ ರಶೀದಿಯ ಕೌಂಟರ್.
ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ನೂತನ ಶ್ರೀ ಸಾನಿಧ್ಯ ಸಂಕೀರ್ಣ ಇಂದು ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಉದ್ಘಾಟಿಸಲಿದ್ದಾರೆ.








