ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಜನವರಿ 10ರಿಂದ 19ರವರೆಗೆ ವೈಕುಂಠ ದ್ವಾರವನ್ನು ತೆರೆದಿಡಲಾಗಿದ್ದು, ಈ ಅವಧಿಯಲ್ಲಿ ಏಳು ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯಬಹುದಾಗಿದೆ.
ಹೊಸ ಮಾರ್ಗಸೂಚಿಗಳು:
1.ಟೋಕನ್ ವ್ಯವಸ್ಥೆ: ಉಚಿತ ಪ್ಲಾಟೆಡ್ ಸರ್ವ ದರ್ಶನಕ್ಕೆ (SSD) ಆಗಮಿಸುವ ಭಕ್ತರು ಟೈಮ್ ಫ್ಲಾಟ್ ಟೋಕನ್‌ಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
2.ಕೌಂಟರ್‌ಗಳು: SSD ಟೋಕನ್‌ಗಳ ವಿತರಣೆಗಾಗಿ ತಿರುಪತಿಯಲ್ಲಿ ವಿವಿಧ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.
– ಜೀವಕೋಣ ಜಡ್‌ಪಿ ಪ್ರೌಢಶಾಲೆ – 10 ಕೌಂಟರ್‌ಗಳು
– ಎಂ.ಆರ್.ಪಲ್ಲೆ ಜಡ್‌ಪಿ ಪ್ರೌಢಶಾಲೆ – 08 ಕೌಂಟರ್‌ಗಳು
– ರಾಮಚಂದ್ರ ಪುಷ್ಕರಿಣಿ – 10 ಕೌಂಟರ್‌ಗಳು
– ಇಂದಿರಾ ಮೈದಾನಂ – 15 ಕೌಂಟರ್‌ಗಳು
– ಶ್ರೀನಿವಾಸಮ್ ಕಾಂಪ್ಲೆಕ್ಸ್ – 12 ಕೌಂಟರ್‌ಗಳು
– ವಿಷ್ಣು ನಿವಾಸಮ್ ಕಾಂಪ್ಲೆಕ್ಸ್ – 14 ಕೌಂಟರ್‌ಗಳು
– ಭೂದೇವಿ ಕಾಂಪ್ಲೆಕ್ಸ್ – 11 ಕೌಂಟರ್‌ಗಳು
3.ರೆಕಮಂಡೇಷನ್ ಇಲ್ಲ: ಈ ಹತ್ತು ದಿನಗಳಲ್ಲಿ ಶಿಫಾರಸು ಪತ್ರಗಳನ್ನು ತೆಗೆದುಕೊಳ್ಳುವುದಿಲ್ಲ.
4.ವಸತಿ ಸೌಕರ್ಯ: ಭಕ್ತರು ತಮ್ಮ ಟೋಕನ್ ಅಥವಾ ಟಿಕೆಟ್‌ನಲ್ಲಿ ನಮೂದಿಸಿದ ನಿಗದಿತ ದಿನಾಂಕ ಮತ್ತು ಸಮಯದಂದು ಮಾತ್ರ ತಿರುಮಲಕ್ಕೆ ಬರುವಂತೆ ಮನವಿ ಮಾಡಲಾಗಿದೆ.
ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಭಕ್ತಾದಿಗಳು ಶ್ರೀವಾರಿ ವೈಕುಂಠ ದ್ವಾರ ದರ್ಶನದ ಅನುಭವವನ್ನು ಸುಗಮವಾಗಿ ಪಡೆಯಬಹುದು.








