31 ವರ್ಷಕ್ಕೇ ಮಿಂಚಿ ಮರೆಯಾದ “ಆರತಿ ಅಗರವಾಲ್” ಜನ್ಮ ದಿನ…
ಇಂದು ತೆಲುಗು ಚಿತ್ರರಂಗದಲ್ಲಿ ಮಿಂಚಿ ಮರೆಯಾದ ನಟಿ ಆರತಿ ಅಗರ್ವಾಲ್ ಅವರ ಜನ್ಮದಿನ. ಆರತಿ ಮಾರ್ಚ್ 5 ರಂದು ನ್ಯೂಜೆರ್ಸಿಯಲ್ಲಿ ಜನಿಸಿದರು. ಆರತಿ 14 ವರ್ಷದವಳಿದ್ದಾಗ, ಪೆನ್ಸಿಲ್ವೇನಿಯಾ ನಗರದ ಫಿಲಡೆಲ್ಫಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಸುನೀಲ್ ಶೆಟ್ಟಿ ಅವರಿದ್ದ ವೇದಿಕೆಯಲ್ಲಿ ಡ್ಯಾನ್ಸ್ ನೋಡಿ ಗಮನ ಸೆಳೆದಿದ್ದರು. ಆಕೆಯ ಡ್ಯಾನ್ಸ್ ನೋಡಿದ ಸುನೀಲ್ ಶೆಟ್ಟಿ ಅವರು ಆರತಿ ಅವರ ತಂದೆಗೆ ಬಾಲಿವುಡ್ನಲ್ಲಿ ಪರಿಚಯಿಸುವಂತೆ ಹೇಳಿದರು.
16ನೇ ವಯಸ್ಸಿಗೆ ಪಾದಾರ್ಪಣೆ
ಆರತಿ 16ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2001 ರಲ್ಲಿ ಬಾಲಿವುಡ್ ಚಲನಚಿತ್ರ ‘ಪಾಗಲ್ಪನ್’ ಮತ್ತು ಅದೇ ವರ್ಷ ತೆಲುಗಿನ ವಿಕ್ಟರಿ ವೆಂಕಟೇಶ ಜೊತೆ ‘ನುವ್ವು ನಾಕು ನಚಾವ್’ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತೆಲುಗಿನ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಅಲ್ಲದೆ, ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಜೂನಿಯರ್ ಎನ್ಟಿಆರ್, ಪ್ರಭಾಸ್ ಸೇರಿದಂತೆ ಅನೇಕ ಘಟಾನುಘಟಿಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಆರತಿ ಆತ್ಮಹತ್ಯೆಗೂ ಯತ್ನಿಸಿದ್ದರು…
ಸಹನಟ ತರುಣ್ ಜೊತೆಗಿನ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿ 2005ರಲ್ಲಿ ಆತ್ಮಹತ್ಯೆ ಯತ್ನಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಸುಮಾರು 25 ಚಿತ್ರಗಳಲ್ಲಿ ನಟಿಸಿದ್ದಾರೆ.
ಸ್ಥೂಲಕಾಯದಿಂದ ಬಳಲುತ್ತಿದ್ದ ಆರತಿ, ತಾವು ಮರಣವಪ್ಪುವ ಒಂದು ತಿಂಗಳ ಮೊದಲು ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಮೂಲಕ ಅವರ ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲಾಯಿತು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಹೈದರಾಬಾದ್ ನ ವೈದ್ಯರು ಸಲಹೆ ನೀಡಿದ್ದರೂ ವೈದ್ಯರ ಮಾತಿಗೆ ಕಿವಿಗೊಟ್ಟಿರಲಿಲ್ಲ. ಈ ಶಸ್ತ್ರಚಿಕಿತ್ಸೆಯ ನಂತರ ಉಸಿರಾಟದ ತೊಂದರೆಯನ್ನು ಅನುಭವಿಸಿದರು.
ಹೆಚ್ಚಿನ ಚಿಕಿತ್ಸೆಗಾಗಿ ಆರತಿ ಅವರನ್ನ ನ್ಯೂಜೆರ್ಸಿಯ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಮತ್ತೊಂದು ಆಪರೇಷನ್ ಒಳಗಾಗಬೇಕಾಗಿತು. ಆದರೆ ಇದ್ದಕ್ಕಿದ್ದಂತೆ ಅವರು ಸಾವನ್ನಪ್ಪಿದ್ದರು. ಆರತಿಯ ಮರಣದ ನಂತರ, ಆಕೆಯ ಮ್ಯಾನೇಜರ್ ಅವರು ಸ್ಥೂಲಕಾಯತೆ ಮತ್ತು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು, ಚಿಕಿತ್ಸೆಯ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಜೂನ್ 6, 2015 ರಂದು ನ್ಯೂಜೆರ್ಸಿಯಲ್ಲಿ ನಿಧನರಾದಗ ಆರತಿಯವರ ವಯಸ್ಸು ಕೇವಲ 31 ವರ್ಷ. ಅವರ ಸಾವಿನ ಒಂದು ದಿನ ಮೊದಲು ಅಂದರೆ ಜೂನ್ 5, 2015 ರಂದು ಅವರ ಅಭಿನಯದ ಕೊನೆಯ ಚಿತ್ರ ‘ರಣಂ-2’ ಬಿಡುಗಡೆಯಾಗಿತ್ತು. ಶಸ್ತ್ರಚಿಕಿತ್ಸೆಗಾಗಿ ಆರತಿ ಈ ಹಿಂದೆ ಹೈದರಾಬಾದ್ ಮೂಲದ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ವೈದ್ಯರು ಶಸ್ತ್ರ ಚಿಕಿತ್ಸೆಗೆ ನಿರಾಕರಿಸಿದ್ದರು.
ಆರತಿ ಸ್ಥೂಲ ಕಾಯದಿಂದ ಬಳಲುತ್ತಿದ್ದ ಕಾರಣಕ್ಕೆ ಸಿನಿಮಾಗಳ ಆಫರ್ ನಿಂತು ಹೋಗಿತ್ತು. ಇದು ನಟಿಯ ಖಿನ್ನತೆಗೆ ಕಾರಣವಾಗಿತ್ತು. ಇದರಿಂದ ಖಿನ್ನತೆಗೆ ಒಳಗಾಗಿದ್ದರು, ಆರ್ಥಿಕ ಸ್ಥಿತಿಯೂ ಹದಗೆಟ್ಟಿತ್ತು. ಇದೆಲ್ಲರಿಂದ ಹೊರಬರಲು ಅವರು ಆಯ್ದುಕೊಂಡಿದ್ದು ಶಸ್ತ್ರ ಚಿಕಿತ್ಸೆ. ಬೊಜ್ಜು ಹೋಗಲಾಡಿಸಲು ಶಸ್ತ್ರಚಿಕಿತ್ಸೆಗೆ ಒಳಪಡುವ ಮಾರ್ಗ ಆರಿಸಿಕೊಂಡಿದ್ದು ಅವರ ಜೀವಕ್ಕೆ ಸಂಚಕಾರ ತಂದಿತು…
Today is the birthday of actress Aarti Agarwal, who shone in the Telugu cinema