ಚಂದನವನದ ಅಂಗಳದಲ್ಲಿ ಇಂದು ಮೂವರು ಸೆಲೆಬ್ರಿಟಿಗಳ ಹುಟ್ಟು ಹಬ್ಬದ ದಿನ. ಹೀಗಾಗಿ ಸೆಪ್ಟೆಂಬರ್ 18 ಚಿತ್ರ ರಸಿಕರ ಪಾಲಿಗೆ ವಿಶೇಷ ದಿನವಾಗಿದೆ.
ಇಂದು ಹಿರಿಯ ನಟ ವಿಷ್ಣುವರ್ಧನ್, ಉಪೇಂದ್ರ (Upendra) ಹಾಗೂ ಶ್ರುತಿ ಅವರ ಜನ್ಮದಿನವಾಗಿದೆ. ಈ ನಿಟ್ಟಿನಲ್ಲಿ ಅಭಿಮಾನಿಗಳು ನೆಚ್ಚಿನ ನಟರ ಹೆಸರಿನಲ್ಲಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರರಂಗದ ಓರ್ವ ಅದ್ಭುತ ನಟ ವಿಷ್ಣುವರ್ಧನ್. ಸುದೀಪ್ ಸೇರಿದಂತೆ ಹಲವಾರು ನಾಯಕ ನಟ, ನಟಿಯರಿಗೆ ಇಂದಿಗೂ ವಿಷ್ಣು ದಾದಾ ಮಾದರಿಯಾಗಿದ್ದಾರೆ. ಅವರು ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂದು ಅವರು ನಮ್ಮೊಂದಿಗೆ ಇದ್ದಿದ್ದರೆ 73ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು.
ಆದರೆ, ಅವರಿಲ್ಲದ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ವಿಷ್ಣು ಇಲ್ಲದಿದ್ದರೂ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.
1972ರಲ್ಲಿ ತೆರೆಗೆ ಬಂದಿದ್ದ ‘ನಾಗರಹಾವು’ ಅವರ ಮೊದಲ ಚಿತ್ರ. ಈ ಚಿತ್ರದ ಮೂಲಕ ಅವರು ಜನಪ್ರಿಯತೆ ಪಡೆದರು. ಆನಂತರ ಹಿಂದಿರುಗಿ ನೋಡಲೇ ಇಲ್ಲ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ವಿಷ್ಣು ದಾದಾ ಅವರು, 2009ರ ಡಿಸೆಂಬರ್ 30ರಂದು ದಾದಾ ನಿಧನರಾಗಿದ್ದಾರೆ. 2010ರಲ್ಲಿ ರಿಲೀಸ್ ಆದ ‘ಆಪ್ತರಕ್ಷಕ’ ಅವರ ನಟನೆಯ ಕೊನೆಯ ಸಿನಿಮಾ ಆಗಿದೆ.