ನಾಳೆ `ಒಂದು ಗಂಟೆಯ ಕಥೆ’ ಸಿನಿಮಾ ರಿಲೀಸ್..!

1 min read
ondhu gante kathe

ನಾಳೆ `ಒಂದು ಗಂಟೆಯ ಕಥೆ’ ಸಿನಿಮಾ ರಿಲೀಸ್..!

ನಿರ್ದೇಶಕ ದ್ವಾರ್ಕಿ ರಾಘವ್ ನಿರ್ದೇಶನದ ಒಂದು ಗಂಟೆಯ ಕಥೆ ಸಿನಿಮಾ ನಾಳೆ ರಿಲೀಸ್ ಆಗಲಿದೆ. ಈ ಚಿತ್ರವನ್ನ ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಶ್ಯಪ್ ದಾಕೋಜು ಅವರು ನಿರ್ಮಿಸಿದ್ದಾರೆ.ದುಶ್ಯಂತ್ ಹಾಗೂ ಶ್ವೇತ ದಾಕೋಜು ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.

ಒಂದು ಗಂಟೆಯ ಕಥೆ ಹಾಸ್ಯಮಯ ಸಿನಿಮಾವಾಗಿದ್ದು. ನೈಜ ಘಟನೆಯೊಂದಿಗೆ ವಿವರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಚಿತ್ರಕ್ಕೆ ದ್ವಾರ್ಕಿ ರಾಘವ್ ಅವರು ಚಿತ್ರಕಥೆ ಬರೆದಿದ್ದಾರೆ. ಡೆನಿಸ್ ವಲ್ಲಭನ್ ಸಂಗೀತ ನೀಡಿದ್ದು, ಸೂರ್ಯಕಾಂತ್ ಛಾಯಾಗ್ರಹಣ ಹಾಗೂ ಗಣೇಶ್ ಮಲ್ಲಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ.

ondhu gante kathe

ಇನ್ನು ತಾರಾಬಳಗ ವಿಚಾರಕ್ಕೆ ಬಂದ್ರೆ ಅಜಯ್ ರಾಜ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ನಾಯಕಿ ಶನಾಯ ಕಾಟ್ವೆ. ಸ್ವಾತಿ ಶರ್ಮ,ಪ್ರಕಾಶ್ ತುಮ್ಮಿನಾಡ್, ಯಶವಂತ ಸರ್ ದೇಶಪಾಂಡೆ, ಚಿದಾನಂದ್, ಪ್ರಶಾಂತ್ ಸಿದ್ದಿ, ಸಿಲ್ಲಿಲಲ್ಲಿ ಆನಂದ್, ನಾಗೇಂದ್ರ ಶಾ, ಚಂದ್ರಕಲಾ, ರೆಮೊ, ಮೇಫ ಜಕಾತಿ, ಜಯದೇವ್, ಸುಜಯ್, ಸೋಮು, ಎಂ.ಎನ್.ಲಕ್ಷ್ಮೀದೇವಿ ಚಿತ್ರದಲ್ಲಿದ್ದಾರೆ.
ಇನ್ನು ಚಿತ್ರತಂಡ ಇದು ಫುಲ್ ಅಂಡ್ ಫುಲ್ ಹೆಣ್ಮಕ್ಳ ಸಿನಿಮಾ ಬಟ್ ಹುಡುಗ್ರು ನೋಡಬಹುದು ಗುರು ಎಂದು ಟ್ಯಾಗ್ ಲೈನ್ ಕೊಟ್ಟು, ನಿರೀಕ್ಷೆಗಳನ್ನ ಹೆಚ್ಚಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd