ಆನೇಕಲ್: ಗಾಂಜಾ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್ ಮಗ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಒಡಿಶಾದಿಂದ ಬೆಂಗಳೂರಿಗೆ 2 ಕಾರಿನಲ್ಲಿ ಅಕ್ರಮವಾಗಿ ಗಾಂಜಾ (ganja) ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪುತ್ರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಗಾಂಜಾ ಸಮೇತ ಆರೋಪಿಗಳು ಸಿಕ್ಕಿದ್ದಾರೆ. ಕಿಶೋರ್ ಪ್ರಕಾಶ್ ರೆಡ್ಡಿ(34), ಸುದ್ದಗುಂಟೆಪಾಳ್ಯ ಮಾಜಿ ಕಾರ್ಪೊರೇಟರ್ ಮಗ ಅಭಿನವ್(30), ಬಾಲಾಜಿ ನಗರ ವಾಸಿ ಸುಮಂತ್ ಕುಮಾರ್ (24) ಆರೋಪಿಗಳು. ಬಂಧಿತರಿಂದ 60 ಕೆಜಿ ಗಾಂಜಾ, ಏಳು ಮೊಬೈಲ್, ಎರಡು ಕಾರು ಮತ್ತು 2.28 ಲಕ್ಷ ರೂ. ನಗದು ಸೇರಿದಂತೆ 44 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.