ಪ್ರಖ್ಯಾತ ಹಿಂದಿ ಸೀರಿಯಲ್ ಅನುಪಮಾ ಸೆಟ್ನಲ್ಲಿ ನಡೆದ ದಾರುಣ ಘಟನೆ ಮನಕಲುಕುವಂತಿದೆ. ಮುಂಬೈನ ಗೋರೇಗಾಂವ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯುವ ಸಂದರ್ಭದಲ್ಲಿ, ಕ್ಯಾಮೆರಾಮನ್ ಸಹಾಯಕರೊಬ್ಬರು ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.
ಸಾಯಿ ವೀಡಿಯೋ ಎಂಬ ಕಂಪನಿಯಿಂದ ವೀಡಿಯೋ ಉಪಕರಣಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು. ಈ ಕಂಪನಿಯಿಂದ ಬಂದಿದ್ದ ಸಹಾಯಕನು ಶೂಟಿಂಗ್ ವೇಳೆ ಅಜಾಗರೂಕತೆಯಿಂದ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದಿದ್ದು, ಶಾಕ್ ತಗುಲಿ ಆತನ ಆರೋಗ್ಯ ಹದಗೆಟ್ಟಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಿತಾದರೂ, ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ.
ಮುಂಬೈನ ಆರೆ ಕಾಲಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಘಟನೆಗೆ ಕಾರಣವಾದ ಪರಿಸ್ಥಿತಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಸೀರಿಯಲ್ ತಂಡ ಹಾಗೂ ಸಾಯಿ ವೀಡಿಯೋ ಸಂಸ್ಥೆ ಮೃತನ ಕುಟುಂಬಕ್ಕೆ ಕೆಲವು ಆರ್ಥಿಕ ನೆರವು ನೀಡಿವೆ. ಜೊತೆಗೆ, ಆತನ ಮೃತದೇಹವನ್ನು ಬಿಹಾರಕ್ಕೆ ಕೊಂಡೊಯ್ಯುವ ವೆಚ್ಚವನ್ನೂ ಕಂಪನಿ ಹೊತ್ತಿದೆ.ಮೃತ ಸಹಾಯಕ ಬಿಹಾರ ಮೂಲದವನು.
ಪ್ರೊಡಕ್ಷನ್ ಟೀಮ್ಗಳು ತಮ್ಮ ಸೆಟ್ಗಳಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಅನುಸರಿಸುವ ಮಹತ್ವವನ್ನು ಮತ್ತೊಮ್ಮೆ ಮನದಟ್ಟು ಮಾಡಿಕೊಳ್ಳಬೇಕಾದ ಅಗತ್ಯವಿದೆ.








