ಪಬ್ ಜಿ ಆಡುತ್ತಾ ರೈಲ್ವೆ ಹಳಿ ಮೇಲೆ ಕುಳಿತ ಬಾಲಕರು, ಅಫಘಾತದಲ್ಲಿ ಸಾವು
ಆನ್ಲೈನ್ ಗೇಮ್ ಗೀಳಿಗೆ ಬಿದ್ದಿರುವ ಯವ ಜನತೆ ಸುತ್ತ ಮುತ್ತ ಏನು ನಡೆಯುತ್ತಿದದೆ ಎಂಬ ಪರಿವೆ ಇಲ್ಲದೆ ಮಾಡಿಕೊಳ್ಳುತ್ತಿರುವ ಯಡವಟ್ಟುಗಳು ಒಂದೆರಡಲ್ಲ….
ಪಬ್ ಜಿ ಗೇಮ್ ಆಡುತ್ತಾ ಅದರಲ್ಲಿ ಮುಳುಗಿದ ಇಬ್ಬರು ಬಾಲಕರು ಹೋಗಿ ರೈಲ್ವೆ ಹಳಿಯಲ್ಲಿ ಕುಳಿತುಕೊಂಡು ಆಟದಲ್ಲಿ ಮಗ್ನರಾಗಿದ್ದಾರೆ. ರೈಲು ಬಂದರು ಅದನ್ನ ಗಮನಿಸದೆ ಆಟದಲ್ಲಿ ತಲ್ಲಿನರಾಗಿದ್ದಾರೆ. ಇದರ ಪರಿಣಾಮ ಇಬ್ಬರು ಬಾಲಕರ ಮೇಲೆ ರೈಲು ಹರಿದು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮೀ ನಗರದ ನಿವಾಸಿಗಳಾದ ಗೌರವ್ ಕುಮಾರ್ (14) ಮತ್ತು ಕಪಿಲ್ ಕುಮಾರ್ (14) ರೈಲು ಹರಿದು ಮೃತಪಟ್ಟ ಬಾಲಕರು. ಇವರಿಬ್ಬರೂ 10 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು , ಬೆಳಗಿನ ಜಾವ ವಾಕಿಂಗ್ ಗ ದು ಜೊತೆಯಾಗಿ ಹೊರಟಿದ್ದರು ಎಂದು ಪೊಷಕರು ತಿಳಿಸಿದ್ದಾರೆ.
7 ಗಂಟೆ ಸುಮಾರಿಗೆ ಸ್ಥಳಿಯರಿಗೆ ಶವಗಳು ಪತ್ತೆಯಾಗಿವೆ. ಅಪಘಾತ ನಡೆದ ಸ್ಥಳದಲ್ಲಿ ಎರಡು ಮೊಬೈಲ್ ಗಳು ಸಿಕ್ಕಿದ್ದು, ಒಂದು ಪೋನ್ ಛಿದ್ರಗೊಂಡಿದ್ದರೆ ಇನ್ನೊಂದು ಪೋನ್ ಕಾರ್ಯನಿರ್ವಹಿಸುತ್ತಿತ್ತು. ಅದರಲ್ಲಿ ಪಬ್ ಜಿ ಗೇಮ್ ಆಟ ನಡೆಯುತ್ತಿತ್ತು.
ಬಾಲಕರು ಗೇಮ್ ಆಡುತ್ತಾ ರೈಲು ಹಳಿಯ ಮೇಲೆ ಕುಳಿತಿದ್ದಾಗ ರೈಲು ಅವರ ಮೇಲೆ ಹರಿದಿರುವ ಸಾಧ್ಯತೆ ಇದೆ ಎಂದು ಜಮುನಾಪುರ್ ಪೊಲಿಸ್ ಠಾಣೆಯ ಇನ್ಸ್ ಪೆಕ್ಟರ್ ಶಶಿ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.