ಮಹಾರಾಷ್ಟ್ರದ ಜಲಗಾಂವ್ ನಲ್ಲಿ ತರಬೇತಿ ವಿಮಾನ ಪತನ: ಬೆಂಗಳೂರಿನ ಪೈಲಟ್ ಸಾವು
ಮಹಾರಾಷ್ಟ್ರ : ಮಹಾರಾಷ್ಟ್ರದ ಜಲಗಾಂವ್ ನಲ್ಲಿ ತರಬೇತಿ ವಿಮಾನ ಪತನಗೊಂಡಿದ್ದು, ಬೆಂಗಳೂರಿನ ಪೈಲೆಟ್ ಮೃತಪಟ್ಟಿದ್ದಾರೆ.. ಚೋಪ್ಡಾ ಬಳಿ ಶುಕ್ರವಾರ ತರಬೇತಿ ವಿಮಾನ ಪತನಗೊಂಡು ಪೈಲಟ್ ತರಬೇತುದಾರ, ಬೆಂಗಳೂರಿನ ನೂರುಲ್ ಅಮೀನ್ (28) ಮೃತಪಟ್ಟಿದ್ದಾರೆ. ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್, ಮಧ್ಯ ಪ್ರದೇಶದ ಅನಿಷ್ಕಾ ಗುರ್ಜರ್ ಗಾಯಗೊಂಡಿದ್ದಾರೆ. ಇವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರ್ಜರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎರಡು ಆಸನಗಳ ಇಟಲಿ ನಿರ್ಮಿತ ತರಬೇತಿ ವಿಮಾನವು ಧುಲೆ ನಗರದ ಶಿರ್‌ಪುರದಲ್ಲಿರುವ ಎನ್‌ಎಂಐಎಂಎಸ್ ಅಕಾಡೆಮಿಗೆ ಸೇರಿದ್ದು ಎನ್ನಲಾಗಿದೆ. ವಿಮಾನವು ಶಿರ್‌ಪುರದಿಂದ ಟೇಕಾಫ್ ಆಗಿತ್ತು. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ನಾಗರಿಕ ವಿಮಾಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ತನಿಖಾ ತಂಡ ಸ್ಥಳಕ್ಕೆ ತೆರಳಿದೆ ಎಂದು ತಿಳಿಸಿದ್ದಾರೆ. ಸದ್ಯ ವಿಮಾನ ಪತನಕ್ಕೆ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
“ಮುಂದಿನ 100 ದಿನಗಳು ಅತ್ಯಂತ ನಿರ್ಣಾಯಕ” – ಕೋವಿಡ್ 3ನೇ ಅಲೆ ಬಗ್ಗೆ ಎಚ್ಚರಿಕೆ..!