Transman gives birth : ಭಾರತದಲ್ಲೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ಟ್ರಾನ್ಸ್ ಮ್ಯಾನ್ – ಪೋಷಕರಾದ ತೃತಿಯ ಲಿಂಗಿಗಳು..
ಭಾರತದಲ್ಲಿ ಮೊದಲ ಬಾರಿಗೆ ತೃತಿಯಲಿಂಗಿ (ಟ್ರಾನ್ಸಜೆಂಡರ್) ದಂಪತಿಗಳು ಮಗುವಿಗೆ ಜನ್ಮ ನೀಡಿದ್ದಾರೆ. ಕೇರಳದ ತೃತೀಯಲಿಂಗಿ ದಂಪತಿಗಳಾದ ಜಹಾದ್ ಮತ್ತು ಜಿಯಾ ಪಾವಲ್ ಈ ಮೂಲಕ ಪೋಷಕರಾಗಿದ್ದಾರೆ. ಟ್ರಾನ್ಸ್ ಮ್ಯಾನ್ ಜಹಾದ್ ಮಗುವಿಗೆ ಜನ್ಮ ನೀಡಿದ್ದಾರೆ. ಆದರೇ ಮಗುವಿನ ಲಿಂಗವನ್ನ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
23ರ ಹರೆಯದ ಜಿಯಾ ಪೊವೆಲ್, ಹುಡುಗಿಯಾಗಿ ಮಾರ್ಪಟ್ಟಿದ್ದು, ತನ್ನ ತಾಯಿಯಾಗುವ ಕನಸು ಮತ್ತು ತಂದೆಯಾಗುವ ತನ್ನ ಆಸೆ ಶೀಘ್ರದಲ್ಲೇ ನನಸಾಗಲಿದೆ ಎಂದು ಕೆಲ ದಿನಗಳ ಹಿಂದೆಯಷ್ಟೆ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗದ ಮೂಲಕ ಬೆಳಿಗ್ಗೆ 9.30 ರ ಸುಮಾರಿಗೆ ಮಗು ಜನಿಸಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತೃತಿಯಲಿಂಗಿ ದಂಪತಿಗಳಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ.
ಜಿಯಾ ಪಾವಲ್ ನೃತ್ಯಗಾರ್ತಿ. ಪುರುಷನಾಗಿದ್ದ ಅವರು ಟ್ರಾನ್ಸ್ಜೆಂಡರ್ ಮಹಿಳೆಯಾಗಿದ್ದಾಳೆ. ಜಹಾದ್ ಒಬ್ಬ ಹುಡುಗಿ ಅವರು ಪುರುಷ ಟ್ರಾನ್ಸ್ಜೆಂಡರ್ ಆಗಿ ಬದಲಾಗಿದ್ದಾರೆ. ಗರ್ಭಿಣಿಯಾಗುವ ಕಾರಣಕ್ಕಾಗಿ ಜಹಾದ್ ಹೆಣ್ಣಿನಿಂದ ಗಂಡಾಗಿ ಬದಲಾಗುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯರ ತಂಡವು ಗರ್ಭಿಣಿಯಾಗಲು ಯಾವುದೇ ದೈಹಿಕ ಸಮಸ್ಯೆಗಳಿಲ್ಲ ಎಂದು ಬಹಿರಂಗಪಡಿಸಿದ ನಂತರ, ಜಹಾದ್ ಮಗುವಿಗೆ ಜನ್ಮ ನೀಡಲು ತಯಾರಾಗಿದ್ದರು. ಜಹಾದ್ ತನ್ನ ಸ್ತ್ರೀತ್ವವನ್ನು ಉಳಿಸಿಕೊಂಡು ಗರ್ಭಿಣಿಯಾಗಲು ನಿರ್ಧರಿಸಿದ್ದರು.
Transman gives birth: Transman who gave birth to a child for the first time in India – the parents are trisexual..