ಬೀದರ್: ಬಸ್ ನಲ್ಲಿಯೇ ಗಾಂಜಾ ಸಾಗಿಸುತ್ತಿದ್ದ ಖದೀಮರನ್ನು ಪೊಲೀಸರು ಬೇಟೆಯಾಡಿದ್ದಾರೆ.
ಮಹಾರಾಷ್ಟ್ರದ (Maharashtra) ಸಾರಿಗೆ ಬಸ್ನಲ್ಲಿ ಗಾಂಜಾ (Drugs) ಸಾಗಿಸುತ್ತಿದ್ದ ಇಬ್ಬರು ಗಾಂಜಾಕೋರರನ್ನು ದಾಳಿ ನಡೆಸಿ ಬಂಧಿಸಿರುವ ಪೊಲೀಸರು 10 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ಮಧುಕರ್ ಹಾಗೂ ಅಮರ್ ಬಂಧಿತ ಆರೋಪಿಗಳು. ಬಂಧಿತರು ತೆಲಂಗಾಣದಿಂದ ಬೀದರ್ ಮೂಲಕ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬೀದರ್ – ತೆಲಂಗಾಣ ಗಡಿಯಲ್ಲಿ ಬಸ್ ತಪಾಸಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಲಾ 2 ಕೆಜಿಯ 5 ಪ್ಯಾಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಸಾಗಾಟ ಮಾಡುತ್ತಿದ್ದ ಗಾಂಜಾಕೋರರನ್ನು ಬಂಧಿಸಿದ ಬೀದರ್ ಅಬಕಾರಿ ಪೊಲೀಸರು 10 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.