ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗುವ ಕನಸು ಹೊತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ತೆರಿಗೆ ವಿಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಆಮದು ಸಾಮಾಗ್ರಿಗಳ ಮೇಲೆ ಸೇಡಿನ ತೆರಿಗೆ ವಿಧಿಸುತ್ತೇನೆ ಎಂದು ಹೇಳಿದ್ದಾರೆ. ಪ್ರತಿಷ್ಠಿತ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಗಳ ಮೇಲೆ ಭಾರತ ವಿಧಿಸಿರುವ ಹೆಚ್ಚಿನ ತೆರಿಗೆಯ ಕುರಿತು ಅವರು ಮಾತನಾಡಿದ್ದಾರೆ. ಟ್ರಂಪ್ ಭಾರತದ ತೆರಿಗೆ ದರಗಳು ತುಂಬಾ ದುಬಾರಿಯಾಗಿವೆ ಎಂದು ಆರೋಪಿಸಿದ್ದಾರೆ.
ತಾವು ಅಧಿಕಾರಕ್ಕೆ ಬಂದರೆ ಅದಕ್ಕೆ ಎದುರಾಗಿ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಯುಎಸ್ ಅಧ್ಯಕ್ಷರಾಗಿದ್ದಾಗಲೇ ಟ್ರಂಪ್ ಭಾರತವನ್ನು ಸುಂಕಗಳ ರಾಜ ಎಂದು ಹೇಳಿದ್ದರು. ಮೇ 2019ರಲ್ಲಿ ಭಾರತವು ಅದರ ಮಾರುಕಟ್ಟೆಗಳಿಗೆ ಸಮಾನ ಹಾಗೂ ಸಮಂಜಸವಾದ ಪ್ರವೇಶವನ್ನು ಅಮೆರಿಕಕ್ಕೆ ನೀಡಿಲ್ಲ ಎಂದು ಆರೋಪಿಸಿಸಿ ಯುನೈಟೆಡ್ ಸ್ಟೇಟಸ್ ನ ಆದ್ಯತೆಯ ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿದ್ದರು.
ಭಾರತವು ನಮಗೆ ಹೆಚ್ಚಿನ ಸುಂಕ ವಿಧಿಸಿದರೆ ನಾನು ಸೇಡಿತ ತೆರಿಗೆ ಹಾಕ ಬಯಸುತ್ತೇನೆ. ಭಾರತದಲ್ಲಿ ಸುಂಕ ತುಂಬಾ ಹೆಚ್ಚಿದೆ ಎಂದು ಆರೋಪಿಸಿದ್ದಾರೆ. ಟ್ರಂಪ್ ಸದ್ಯ ಹಲವಾರು ನ್ಯಾಯಾಲಯ ಪ್ರಕರಣಗಳನ್ನು ಹಾಗೂ ದೋಷಾರೋಪಣೆಗಳ ಸರಣಿಯನ್ನು ಎದುರಿಸುತ್ತಿದ್ದಾರೆ.