ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ತುಳು ಹೆಚ್ಚುವರಿ ಭಾಷೆಯಾಗುವ ಸಾಧ್ಯತೆ ಇದೆ. ಏಕೆಂದರೆ, ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಇದಕ್ಕೆ ಪುಷ್ಟಿ ನೀಡಿದೆ.
ಅರಮನೆ ಮೈದಾನದಲ್ಲಿ ನಡೆದ ಕಂಬಳ (Kambala) ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಇದು ಕರಾವಳಿ ಭಾಗದ ಪ್ರಸಿದ್ಧ ಕ್ರೀಡೆಯಾಗಿದೆ. ಈ ಕ್ರೀಡೆ ಪ್ರತಿ ವರ್ಷವೂ ಇದೇ ರೀತಿಯಲ್ಲಿ ನಡೆಯಲಿ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಆಯೋಜನೆ ಮಾಡಿ. ಕಂಬಳ ಕ್ರೀಡೆ ಉಳಿಸಿ, ಬೆಳೆಸಬೇಕು ಎಂದು ಹೇಳಿದ್ದಾರೆ.
ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳದ ಮೊದಲ ದಿನದ ಅದ್ಭುತವಾಗಿ ನಡೆಯಿತು. ಕೋಣಗಳು ಕರೆಯಲ್ಲಿ ವೇಗವಾಗಿ ಓಡುತ್ತಿದ್ದರೆ, ಮತ್ತೊಂದೆಡೆ ಓಟಗಾರರನ್ನು ಹುರಿದುಂಬಿಸುತ್ತಿದ್ದ ಜನರಿಂದ ಮೈದಾನ ರಿಂಗಣಿಸುತ್ತಿತ್ತು.