ತುಮಕೂರು : ಬ್ಲಾಕ್ ಫಂಗಸ್ ಗೆ ಮೊದಲ ಬಲಿ..?
ತುಮಕೂರು : ರಾಜ್ಯದಲ್ಲಿ ಕೊರೊನಾ ಕಾಟದ ಮಧ್ಯೆ ಬ್ಲಾಕ್ ಫಂಗಸ್ ಸೋಂಕು ಕೂಡ ಹೆಚ್ಚಾಗುತ್ತಿದೆ.
ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ಮಧ್ಯೆ ತುಮಕೂರನಲ್ಲಿ ಬ್ಯ್ಲಾಕ್ ಫಂಗಸ್ ಗೆ ಮೊದಲ ಬಲಿಯಾಗಿದೆ ಎಂದು ತಿಳಿದು ಬಂದಿದೆ.
ಕುಣಿಗಲ್ ಮೂಲದ ಶಿರಾ ನಿವಾಸಿ ಬ್ಲಾಕ್ ಫಂಗಸ್ ಗೆ ಶಂಕೆ ವ್ಯಕ್ತವಾಗಿದೆ.
ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈತನಿಗೆ ಬ್ಲಾಕ್ ಫಂಗಸ್ ಗುಣಲಕ್ಷಣ ಇತ್ತು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಇಂದು ಮಧ್ಯಾಹ್ನದ ವೇಳೆಗೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಗಳಿವೆ.