Turkey-ಟರ್ಕಿ: ಉತ್ತರ ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಸಂಜೆ 6.45ಕ್ಕೆ ಭೀಕರ ಗಣಿ ಸ್ಫೋಟ ಸಂಭವಿಸಿ 28 ಜನರು ಸಾವನ್ನಪ್ಪಿದ್ದಾರೆ.
ಸರ್ಕಾರಿ ಸ್ವಾಮ್ಯದಲ್ಲಿಯುವ TTK ಅಮಸ್ರಾ ಮ್ಯೂಸ್ಸೆಸ್ ಮುದುರ್ಲುಗು ಗಣಿಯಲ್ಲಿ ದುರ್ಘಟನೆ ಸಂಭವಿಸಿದೆ. ಗಣಿಗಳಲ್ಲಿ ಫೈರ್‌ಡ್ಯಾಂಪ್‌ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ಮಹಿತಿಯಲ್ಲಿ ತಿಳಿದುಬಂದಿದೆ. ಗಣಿಯಲ್ಲಿದ್ದ 110 ಜನರಲ್ಲಿ 49 ಜನ ಅಪಾಯದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ.
Life Style-ಯಶಸ್ಸಿನ ಜೀವನಕ್ಕೆ 15 ನಿಯಮಗಳು
ಘಟನೆಯಲ್ಲಿ 49 ರಲ್ಲಿ ಜನರನ್ನ ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟದಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಾರ್ಟಿನ್ ಗವರ್ನರ್ ಕಚೇರಿ ತಿಳಿಸಿದೆ. ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ಮಂದಿ ಸೇರಿದಂತೆ ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ವರದಿ ಮಾಡಿದ್ದಾರೆ.
ನೆರೆಯ ಪ್ರಾಂತ್ಯಗಳಿಂದ ಹಲವಾರು ರಕ್ಷಣಾ ತಂಡಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ AFAD ತಿಳಿಸಿದೆ.
Coal mine explosion in northern Turkey