ನೈಸ್ ರೋಡ್ ನಲ್ಲಿ ದ್ವಿಚಕ್ರ ಸವಾರರಿಗೆ ರಾತ್ರಿ ಸಂಚಾರಕ್ಕೆ ನಿಷೇಧ…
ಪ್ರಯಾಣಿಕರ ಸುರಕ್ಷತೆಯ ಕಾರಣದಿಂದಾಗಿ ರಾತ್ರಿ ವೇಳೆ ದ್ವಿ ಚಕ್ರ ವಾಹನ ಸವಾರರಿಗೆ ನೈಸ್ ರಸ್ತೆಯಲ್ಲಿ ಸಂಚರಿಸಲು ನಿಷೇಧ ಹೇರಲಾಗಿದೆ.
ಬೆಂಗಳೂರು ನಗರ ಸಂಚಾರ ಜಂಟಿ ಆಯುಕ್ತರ ಸೂಚನೆಯ ಮೇರೆಗೆ ನೈಸ್ ರಸ್ತೆಯ ಡಳಿತ ಮಂಡಳಿಯು ಪ್ರಯಾಣಿಸಕರ ಸುರಕ್ಷತೆಯ ದೃಷ್ಟಿಯಿಂದ 16.01.2022 ರಿಂದ ಜಾರಿಯಾಗುವಂತೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೂ ದ್ವಿಚಕ್ರ ಸವಾರರಿಗೆ ನೈಸ್ ರಸ್ತೆಯಲ್ಲಿ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.
ನೈಸ್ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುವಾಗ ಆಗುವ ಅವಘಡಗಳನ್ನ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.