ಎಸ್. ಅಂಗಾರ ಸಚಿವರಾಗಿರುವುದು ಖುಷಿ ತಂದಿದೆ : ಯು.ಟಿ.ಖಾದರ್
ಮಂಗಳೂರು : ಎಸ್.ಅಂಗಾರ ಅವರು ಸಚಿವರಾಗಿರುವ ಬಗ್ಗೆ ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಸುಳ್ಯ ಕ್ಷೇತ್ರದ ಅಂಗಾರ ಅವರು ಸಚಿವರಾಗಿರುವುದು ಖುಷಿ ತಂದಿದೆ.
ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲಿ. ಅಂಗಾರ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ತಾಲೂಕು ಪಂಚಾಯಿತಿ ರದ್ದು ವಿಚಾರವಾಗಿ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿದರು.
ತಾ.ಪಂ ರದ್ದು ಪಡಿಸಲು ಹೊರಟಿರುವ ಸರ್ಕಾರ ಹಾಗೂ ಸಚಿವರ ಇಂತಹ ಗೊಂದಲದ ಹೇಳಿಕೆಗಳಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ಕೈಬಿಡಬೇಕು.
ಯಾವ ಕಾರಣದಿಂದ ರದ್ದು ಮಾಡ್ತಾ ಇದ್ದೀರಿ ಎಂಬುದನ್ನು ಜನರಿಗೆ ತಿಳಿಸಿ ಎಂದು ಖಾದರ್ ಆಗ್ರಹಿಸಿದರು.
ಇನ್ನು 73ನೇ ತಿದ್ದುಪಡಿಯಂತೆ ಮೂರು ಹಂತಗಳಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ.
ತಾಲೂಕು ಪಂಚಾಯಿತಿ ರದ್ದು ಪಡಿಸಿ ಎಲ್ಲ ಕೆಲಸವನ್ನು ಶಾಸಕರೇ ಮಾಡಬೇಕೆ ಎಂದು ಪ್ರಶ್ನಿಸಿದರು.
ಅಲ್ಲದೆ ಇದರಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ. ಕೂಡಲೇ ಇಂತಹ ಯೋಚನೆ ಕೈಬಿಡಬೇಕು ಎಂದು ಖಾದರ್ ಒತ್ತಾಯಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel