ಪುಣೆಯ ವಡ್ಗಾಂವ್ ಹತ್ತಿರ ಭೀಕರ ಘಟನೆಯೊಂದು ವರದಿಯಾಗಿದ್ದು, ತಮ್ಮ ಮಾಲೀಕನ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ಕಾಮುಕ ಆರೋಪಿಯನ್ನು ವಡ್ಗಾಂವ್ ಶೇರಿ ನಿವಾಸಿ ಸೊಹೈಲ್ ಅಲಿಯಾಸ್ ಸೂರಜ್ ರಂಜಾನ್ ಶೇಖ್ (23) ಎಂದು ಗುರುತಿಸಲಾಗಿದೆ. ಆರೋಪಿಯು ಅಂಗಡಿಯೊಂದರಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಈ ಅಂಗಡಿ ಮಾಲೀಕನ ಅಪ್ರಾಪ್ತ ವಯಸ್ಸಿನ ಮಗಳಿಗೆ ಪ್ರೀತಿಸುವುದಾಗಿ ಹೇಳಿ ಆಮಿಷವೊಡ್ಡಿ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಮಹಿಳೆಯೊಬ್ಬರು ಚಂದನ್ ನಗರ ಪೊಲೀಸ್ ಠಾಣೆಯಲ್ಲಿ (161/23) ದೂರು ದಾಖಲಿಸಿದ್ದು, ಚಂದನ್ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ದೂರುದಾರರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಅಪ್ರಾಪ್ತ ಬಾಲಕಿಗೆ ತುಂಬಾ ಇಷ್ಟ ಪಡುತ್ತಿದ್ದು, ಆಕೆಯನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾನೆ. ಎರಡು ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ತೆರಳಿದ ಆರೋಪಿ, ಆಕೆಯನ್ನು ಬಲವಂತವಾಗಿ ಮಲಗುವ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಆರೋಪಿ ಸೊಹೈಲ್ ಅಲಿಯಾಸ್ ಸೂರಜ್ ರಂಜಾನ್ ಶೇಖ್ನನ್ನು ಪೊಲೀಸರು ಬಂಧಿಸಿದ್ದು, ಪಿಎಸ್ಐ ಕಾಳೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.