Under-19 World Cup Final | ಆಗ ಧೋನಿ.. ಈಗ ದಿನೇಶ್ ಬನಾ.. ವಿನ್ನಿಂಗ್ ಸಿಕ್ಸ್
ಧೋನಿ ಫಿನಿಷಸ್ ಆಫ್ ಇಸ್ ಸ್ಟೈಲ್, ಏ ಮಾಗ್ನಿಫಿಷಿಯೆಂಟ್ ಸ್ಟ್ರೈಕ್ ಇನ್ ಟೂದಿ ಕ್ರೌಡ್.. ಇಂಡಿಯಾ ಲಿಪ್ಟ್ಸ್ ದಿ ವರ್ಲ್ಡ್ ಕಪ್ ಆಫ್ಟರ್ 28 ಇಯರ್ಸ್.. Under-19 World Cup Final dinesh-bana-winning-six
ಈ ಪದವನ್ನು ಕ್ರಿಕೆಟ್ ಅನ್ನ ಪ್ರೀತಿಸುವ ಪ್ರತಿಯೊಬ್ಬ ಭಾರತೀಯನೂ ತಮ್ಮ ಉಸಿರು ಇರುವವರೆಗೂ ಮರೆಯೋದಿಲ್ಲ.
ನಮ್ಮ ಕಿವಿ ಬೆಚ್ಚಿ ಬೀಳುವಂತೆ ಅದೆಷ್ಟೋ ಸಾರಿ ಈ ವಿಡಿಯೋವನ್ನ ನಾವು ಯುಟ್ಯೂಬ್ ನಲ್ಲಿ ನೋಡಿರುತ್ತೇವೆ.
28 ವರ್ಷಗಳ ಕಾಯುವಿಕೆಗೆ ತೆರೆ ಎಳೆಯುತ್ತಾ ಟೀಂ ಇಂಡಿಯಾ 2011ರ ವಿಶ್ವಕಪ್ ಟೈಟರ್ ಎತ್ತಿ ಹಿಡಿದ ಮಧುರ ಕ್ಷಣಗಳವು.
ಅಂದು ಟೀಂ ಇಂಡಿಯಾದ ನಾಯಕರಾಗಿದ್ದ ಎಂ.ಎಸ್.ಧೋನಿ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಕಪ್ ಗೆದ್ದುಕೊಟ್ಟರು.
ಈ ವಿಡಿಯೋವನ್ನು ಇಂದಿಗೂ ನಾವು ಟಿವಿಗಳಲ್ಲಿ ನೋಡುತ್ತಿದ್ದೇವೆ. ಅವು ಮರೆತು ಹೋಗುವ ಕ್ಷಣಗಳಲ್ಲ ಅನ್ನೋದು ಎಲ್ಲರಿಗೂ ಗೊತ್ತು.
ಆ ಫೈನಲ್ನಲ್ಲಿ ಇನ್ನಿಂಗ್ಸ್ನ ನಾಯಕತ್ವ ವಹಿಸಿದ್ದ ಮಹಿ ಔಟಾಗದೆ 90 ರನ್ ಗಳಿಸಿ ಇತಿಹಾಸ ಬರೆದರು. ಆದರೆ ಈಗ ಪ್ರಸ್ತಾಪ ಯಾಕೆ ಅಂತೀರಾ..?
ಅಸಲಿ ಕಹಾನಿ ಏನು ಅಂದರೇ.. ಶಿನಿವಾರ ಮುಗಿದ ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ ಯುವ ಭಾರತ, ಇಂಗ್ಲೆಂಡ್ ವಿರುದ್ಧ ಘನವಿಜಯ ಸಾಧಿಸಿದೆ.
ಆ ಮೂಲಕ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮ್ಯಾಚ್ ನ ಕೊನೆಯಲ್ಲಿ ವಿಕೆಟ್ ಕೀಪರ್ ದಿನೇಶ್ ಬನಾ ಸಿಡಿಸಿದ ವಿನ್ನಿಂಗ್ ಸಿಕ್ಸಸ್, ಥೇಟ್ 2011ರಲ್ಲಿ ಧೋನಿ ಸಿಡಿಸಿದ ಸಿಕ್ಸ್ ನಂತಯೇ ಕಾಣಿಸುತ್ತಿದೆ.
2011ರಲ್ಲಿ ಧೋನಿ ಹೇಗೆ ಸಿಕ್ಸ್ ಹೊಡೆದು ಟೀಂ ಇಂಡಿಯಾಗೆ ವರ್ಲ್ಡ್ ಕಪ್ ಗೆದ್ದುಕೊಟ್ಟರೋ, ಅದೇ ರೀತಿಯಲ್ಲಿ ದಿನೇಶ್ ಬನಾ ಕೂಡ ಲಾಂಗ್ ಆನ್ ಗೆ ಭಾರಿ ಸಿಕ್ಸ್ ಬಾರಿಸಿ ಭಾರತಕ್ಕೆ ಐದನೇ ವಿಶ್ವಕಪ್ ಗೆದ್ದುಕೊಟ್ಟರು.
ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಐಸಿಸಿ ಕೂಡ ಬನಾ ಸಿಕ್ಸ್ ವಿಡಿಯೋವನ್ನ ಶೇರ್ ಮಾಡುತ್ತಾ, ಇದಕ್ಕು ಮೊದಲು ಈ ಸಿಕ್ಸರ್ ನೊಂದಿಗೆ ಮುಕ್ತಾಯಗೊಂಡ ಎಂಡಿಂಗ್ ಅನ್ನು ನೀವು ನೀಡಿದ್ದೀರಾ..? ಎಂದು ಕ್ಯಾಪ್ಷನ್ ಕೊಟ್ಟಿದೆ. ಇಲ್ಲಿ ಮತ್ತೊಂದು ವಿಶೇಷವಾದ ಸಂಗತಿ ಏನಂದರೇ ಧೋನಿ ಮತ್ತು ದಿನೇಶ್ ಬನಾ ಇಬ್ಬರೂ ವಿಕೆಟ್ ಕೀಪರ್ ಗಳೇ ಆಗಿದ್ದಾರೆ.