ADVERTISEMENT
Wednesday, January 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿದವರಿಗೆ ಯಾವ ಕಾನೂನಿನಡಿ ಮನೆ ನೀಡುತ್ತೀರಿ? ಹೊರಗಿನವರ ಓಲೈಕೆಗೆ ಕನ್ನಡಿಗರ ಹಿತ ಬಲಿ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿ

Union Minister V. Somanna lashes out against the state government

Shwetha by Shwetha
January 1, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ನವದೆಹಲಿ:ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನೆಲೆಸಿದ್ದವರ ಪರವಾಗಿ ರಾಜ್ಯ ಸರ್ಕಾರ ನಿಂತಿರುವುದಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನುಬಾಹಿರವಾಗಿ ಮನೆ ಕಟ್ಟಿಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಯಾವ ನಿಯಮಗಳನ್ನು ಅನುಸರಿಸುತ್ತಿದೆ? ಎಂದು ನೇರ ಪ್ರಶ್ನೆ ಹಾಕಿರುವ ಅವರು, ಇದು ಸರ್ಕಾರದ ಓಲೈಕೆ ರಾಜಕಾರಣದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಡೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.

Related posts

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

January 21, 2026
ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

January 21, 2026

ಯಾವ ನಿಯಮದಡಿ ಪುನರ್ವಸತಿ?

ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ನಿರ್ಮಾಣವಾಗಿದ್ದ ಮನೆಗಳು ಅಧಿಕೃತವಲ್ಲ, ಅವು ಸರ್ಕಾರಿ ಜಾಗದಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡಗಳು. ಹೀಗಿದ್ದರೂ, ಹೊರ ರಾಜ್ಯದವರು ಅಥವಾ ಹೊರ ದೇಶಗಳಿಂದ ಬಂದವರು ಸರ್ಕಾರಿ ನಿವೇಶನದಲ್ಲಿ ಅಕ್ರಮವಾಗಿ ನೆಲೆಸಿದ್ದರೆ, ಅಂತಹವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಸಂವಿಧಾನದ ಯಾವ ಕಾನೂನಿನಲ್ಲಿ ಅಥವಾ ಸರ್ಕಾರಿ ನಿಯಮಾವಳಿಯಲ್ಲಿ ಹೇಳಲಾಗಿದೆ? ಅಕ್ರಮ ಎಸಗಿದವರಿಗೆ ಸರ್ಕಾರವೇ ಮುಂದೆ ನಿಂತು ಮನೆ ಕಟ್ಟಿಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.

ಕೇರಳದ ನಾಯಕರ ಟ್ವೀಟ್‌ಗೆ ಮಣಿದ ಸರ್ಕಾರ

ರಾಜ್ಯದಲ್ಲಿ ಈ ಹಿಂದೆ ಅನೇಕ ಕಡೆ ಬಡವರ ಮನೆಗಳನ್ನು ಒತ್ತುವರಿ ಹೆಸರಿನಲ್ಲಿ ತೆರವುಗೊಳಿಸಲಾಗಿತ್ತು. ಅಂದು ಯಾವುದೇ ನಾಯಕರು ಧ್ವನಿ ಎತ್ತಲಿಲ್ಲ, ಸರ್ಕಾರವೂ ಕನಿಷ್ಠ ಮಾನವೀಯತೆಗೂ ಸ್ಪಂದಿಸಿರಲಿಲ್ಲ. ಆದರೆ, ಕೋಗಿಲು ಲೇಔಟ್ ವಿಚಾರದಲ್ಲಿ ಕೇವಲ ಕೇರಳದ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಟ್ವೀಟ್‌ ಮಾಡಿದರು ಎಂಬ ಒಂದೇ ಕಾರಣಕ್ಕೆ ಸರ್ಕಾರ ತರಾತುರಿಯಲ್ಲಿ ಪುನರ್ವಸತಿ ಕಲ್ಪಿಸಲು ಮುಂದಾಗಿದೆ. ಇದು ನಮ್ಮ ವ್ಯವಸ್ಥೆಯ ಮೇಲೆ ಹೊರರಾಜ್ಯದವರ ಸವಾರಿ ಅಲ್ಲದೇ ಮತ್ತೇನು? ಇದು ಅಕ್ಷರಶಃ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ತಾರತಮ್ಯ ನೀತಿ ಎಂದು ಅವರು ಕಿಡಿಕಾರಿದರು.

ಕುರ್ಚಿ ಉಳಿಸಿಕೊಳ್ಳುವ ತಂತ್ರವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಇಷ್ಟು ಕೆಳಮಟ್ಟದ ರಾಜಕೀಯಕ್ಕೆ ಇಳಿಯಬಾರದಿತ್ತು. ಪಕ್ಷದ ಹಿತಾಸಕ್ತಿ ಅಥವಾ ಹೈಕಮಾಂಡ್ ನಾಯಕರ ಓಲೈಕೆ ಏನೇ ಇದ್ದರೂ, ಕರ್ನಾಟಕದ ನೆಲ, ಜಲ ಮತ್ತು ಕನ್ನಡಿಗರ ಹಿತಾಸಕ್ತಿಯೇ ಮುಖ್ಯವಾಗಬೇಕು. ಹೊರಗಿನವರ ಒತ್ತಡಕ್ಕೆ ಮಣಿದು ರಾಜ್ಯದ ಸಂಪನ್ಮೂಲವನ್ನು ಅಕ್ರಮವಾಸಿಗಳಿಗೆ ಧಾರೆಯೆರೆಯುವುದು ಸರಿಯಲ್ಲ. ಸರ್ಕಾರಿ ಅಧಿಕಾರಿಗಳು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ್ದು ಕಾನೂನುಬದ್ಧವಾಗಿಯೇ ಇದೆ. ಆದರೆ ಅದನ್ನು ರಾಜಕೀಯ ಲಾಭಕ್ಕಾಗಿ ತಿರುಚಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯವೇಕಿತ್ತು?

ಸರ್ಕಾರಿ ಜಾಗದಲ್ಲಿ ನೂರಾರು ಮನೆಗಳು ತಲೆ ಎತ್ತುವವರೆಗೆ ಅಧಿಕಾರಿಗಳು ಏನು ಮಾಡುತ್ತಿದ್ದರು? ಅಕ್ರಮವಾಗಿ ಕಟ್ಟಡ ನಿರ್ಮಾಣವಾಗುವ ಸಂದರ್ಭದಲ್ಲಿಯೇ ತಡೆಯುವ ಮಾಹಿತಿ ಅಥವಾ ಅಧಿಕಾರ ಅವರಿಗಿರಲಿಲ್ಲವೇ? ಈಗ ತೆರವು ಮಾಡಿದ ನಂತರ ಮೊಸಳೆ ಕಣ್ಣೀರು ಸುರಿಸುವ ಬದಲು, ಅಕ್ರಮ ತಡೆಯುವಲ್ಲಿ ವಿಫಲರಾದ ವ್ಯವಸ್ಥೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಿಜವಾದ ಅರ್ಹ ಬಡ ಫಲಾನುಭವಿಗಳಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಸೂರು ಕಲ್ಪಿಸಲಿ, ಆದರೆ ಅಕ್ರಮವನ್ನೇ ಸಕ್ರಮವೆಂಬಂತೆ ಬಿಂಬಿಸುವುದು ಬೇಡ ಎಂದು ವಿ.ಸೋಮಣ್ಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ShareTweetSendShare
Join us on:

Related Posts

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

by Shwetha
January 21, 2026
0

ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಇನ್ನು ಮುಂದೆ ಸಾಂಪ್ರದಾಯಿಕ ವಸ್ತ್ರ ಧಾರಣೆ ಕಡ್ಡಾಯವಾಗಲಿದೆ. ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಮಠದ ಗೌರವವನ್ನು ಕಾಪಾಡುವ...

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

by Shwetha
January 21, 2026
0

2026ರ ಮಹಿಳಾ ಪ್ರೀಮಿಯರ್ ಲೀಗ್‌ (WPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿನ ಸರಣಿ ಮುಂದುವರೆದಿದೆ. ಸ್ಮೃತಿ ಮಂಧಾನ ಅವರ ನಾಯಕತ್ವದಲ್ಲಿ ಆಡುತ್ತಿರುವ RCB ಈವರೆಗೆ...

ಶಬರಿಮಲೆ ತೀರ್ಥಯಾತ್ರೆ  ಸಂಪನ್ನ – ಭಕ್ತಿಭಾವದಿಂದ ಅಂತ್ಯಗೊಂಡ ಅಯ್ಯಪ್ಪ ಋತು

ಶಬರಿಮಲೆ ತೀರ್ಥಯಾತ್ರೆ ಸಂಪನ್ನ – ಭಕ್ತಿಭಾವದಿಂದ ಅಂತ್ಯಗೊಂಡ ಅಯ್ಯಪ್ಪ ಋತು

by Shwetha
January 21, 2026
0

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಈ ವರ್ಷದ ವಾರ್ಷಿಕ ತೀರ್ಥಯಾತ್ರೆಯ ಋತು ನಿನ್ನೆ ಭಕ್ತಿಭಾವಪೂರ್ಣವಾಗಿ ಅಂತ್ಯಗೊಂಡಿದೆ. ಸಾವಿರಾರು ಭಕ್ತರ ಸಾಕ್ಷಿಯಾಗಿ, ಸಾಂಪ್ರದಾಯಿಕ...

ರಾಜ್ಯ ರಾಜಕೀಯದ ಬಗ್ಗೆ ನಮ್ಮ ಮನೆಯಲ್ಲೇ 2 ಗಂಟೆ ಚರ್ಚೆ ನಡೆದಿದೆ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

ರಾಜ್ಯ ರಾಜಕೀಯದ ಬಗ್ಗೆ ನಮ್ಮ ಮನೆಯಲ್ಲೇ 2 ಗಂಟೆ ಚರ್ಚೆ ನಡೆದಿದೆ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

by Shwetha
January 21, 2026
0

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ದಲಿತ...

ಅಮಾನತು ಮಾತ್ರವಲ್ಲ ಡಿಸ್ ಮಿಸ್ ಕೂಡ ಮಾಡ್ತೀವಿ ರಾಮಚಂದ್ರ ರಾವ್‌ಗೆ ನಡುಕ ಹುಟ್ಟಿಸಿದ ಗೃಹ ಸಚಿವರು‌

ಅಮಾನತು ಮಾತ್ರವಲ್ಲ ಡಿಸ್ ಮಿಸ್ ಕೂಡ ಮಾಡ್ತೀವಿ ರಾಮಚಂದ್ರ ರಾವ್‌ಗೆ ನಡುಕ ಹುಟ್ಟಿಸಿದ ಗೃಹ ಸಚಿವರು‌

by Shwetha
January 21, 2026
0

ಬೆಂಗಳೂರು: ಪೊಲೀಸ್ ಇಲಾಖೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಗಂಭೀರ ಆರೋಪಕ್ಕೆ ಗುರಿಯಾಗಿರುವ ಸಿಐಡಿ ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram