ಟಾಟಾ ಏಸ್ ಗೆ ಅಪರಿಚಿತ ವಾಹನ ಡಿಕ್ಕಿ | ಇಬ್ಬರ ಸಾವು Saaksha Tv
ಬಾಗಲಕೋಟೆ: ವಾಹನವೊಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿರುವ ಘಟನೆ ಬಾದಾಮಿ ತಾಲೂಕಿನ ಹಳಗೇರಿ ಗ್ರಾಮದ ಸಮೀಪ ನಡೆದಿದೆ.
4 ವರ್ಷದ ಶಿವು ಗೋಸಾವಿ ಹಾಗೂ 35 ವರ್ಷದ ಗೋಪಾಲ ಗೋಸಾವಿ ಮೃತ ದುರ್ದೈವಿಗಳು. ಟಾಟಾ ಏಸ್ ಒಂದರಲ್ಲಿ . ಹತ್ತಕ್ಕೂ ಹೆಚ್ಚು ಜನರು ವಿಜಯಪುರದಿಂದ ರಾಮದುರ್ಗಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಹಳಗೇರಿ ಬಳಿ ಹಿಂಬದಿಯಿಂದ ಬಂದ ವಾಹನ ಟಾಟಾ ಏಸ್ಗೆ ಗುದ್ದಿದೆ.
ಟಾಟಾ ಏಸ್ ಗೆ ವಾಹನ ಗುದ್ದಿದ ಪರಿಣಾಮ ಟಾಟಾ ಏಸ್ ಪಕ್ಕದಲ್ಲಿದ್ದ ಹೊಲದಲ್ಲಿ ಬಿದ್ದಿದ್ದೆ. ಟಾಟಾ ಏಸ್ ನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದು. ಉಳಿದವರು ಗಾಯಗೊಂಡಿದ್ದಾರೆ. ಈ ಕುರಿತು ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.