ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಕಬ್ಜ ಚಿತ್ರತಂಡದಿಂದ ಉಪೇಂದ್ರ ಥೀಮ್ ಪೋಸ್ಟರ್ ಬಿಡುಗಡ ಮಾಡಲು ತಯಾರಿ ನಡೆಸಿಕೊಳ್ಲಲಾಗಿದೆ. ಈ ಮೂಲಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡುತ್ತಿದೆ. ಥೀಮ್ ಪೋಸ್ಟರ್ ಅನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸೆಪ್ಟೆಂಬರ್ 17ರ ಸಂಜೆ 5 ಕ್ಕೆ ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿದ್ದ, ಅದ್ದೂರಿ ಸೆಟ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. MTB ನಾಗರಾಜ್ ಅವರ ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಸಿನೆಮಾಗೆ ಆರ್ ಚಂದ್ರು ಅವರು ಆಕ್ಷನ್ ಕಟ್ ಹೇಳುತ್ತಿದ್ದು, ರವಿ ಬಸ್ರೂರು ಅವರ ಸಂಗೀತವಿರಲಿದೆ.. ಇನ್ನೂ ಎ.ಜೆ.ಶೆಟ್ಟಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಇನ್ನೂ ಚಿತ್ರದಲ್ಲಿ ಉಪೇಂದ್ರ, ಕಾಮರಾಜನ್, ತೆಲುಗಿನ ಖ್ಯಾತ ನಟ ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ಜಯಪ್ರಕಾಶ್ ಸೇರಿದಂತೆ ಅನೇಕ ಖ್ಯಾತ ನಟರ ತಾರಾಬಳಗವಿದೆ.