ಕಬ್ಜ ಶೂಟಿಂಗ್ ವೇಳೆ ಉಪ್ಪಿ ತಲೆಗೆ ರಾಡ್ ತಗುಲಿ ಪೆಟ್ಟು..!
ಬೆಂಗಳೂರು: ಸ್ಯಾಂಡ್ ಲ್ ವುಡ್ ಬಹುನಿರೀಕ್ಷಿತ ಹಾಗೂ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕಬ್ಜ ಸಿನಿಮಾದ ಚಿತ್ರೀಕರಣದ ವೇಳೆ ನಟ ಉಪೇಂದ್ರ ಅವರ ತಲೆಗೆ ರಾಡ್ ತಗುಲಿ ಉಪ್ಪಿ ಗಾಯಗೊಂಡಿದ್ದಾರೆ. ಈ ಸುದ್ದಿ ಗೊತ್ತಾಗ್ತಿದ್ದಂತೆ ಉಪ್ಪಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಆದ್ರೆ ಮೂಲಗಳ ಪ್ರಕಾರ ಹೆಚ್ಚು ತೀವ್ರವಾಗಿ ಪೆಟ್ಟು ಬಿದ್ದಿಲ್ಲ. ಅದೃಷ್ಟವಶಾತ್ ದೊಡ್ಡ ಅನಾಹುತ ಸಂಭವಿಸಿಲ್ಲ ಎನ್ನಲಾಗಿದ್ದು, ಕೆಲ ಗಂಟೆಗಳ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಉಪ್ಪಿ ಅವರು ರೆಸ್ಟ್ ಮಾಡಿ ಚಿತ್ರೀಕರಣಕ್ಕೆ ಮರಳಿದ್ದಾರೆ ಎನ್ನಲಾಗಿದೆ.
ಕಳೆದ ರಾತ್ರಿ ಮಿನರ್ವ ಮಿಲ್ ನಲ್ಲಿ ಆಯಿಲ್ ಮಾರ್ಕೆಟ್ ಸೆಟ್ ನಿರ್ಮಿಸಲಾಗಿತ್ತು. ಇಲ್ಲಿ ಸ್ಟಂಟ್ ಮಾಸ್ಟರ್ ರವಿವರ್ಮ ಮಾರ್ಗದರ್ಶನದಲ್ಲಿ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಉಪ್ಪಿ ತಲೆಗೆ ಪೆಟ್ಟು ಬಿದ್ದಿದೆ.
ಈ ಬಗ್ಗೆ ಉಪೇಂದ್ರ ಅವರು ಟ್ವೀಟ್ ಮಾಡಿ ಅಭಿಮಾನಿಗಳ ಆತಂಕ ದೂರ ಮಾಡಿದ್ದಾರೆ. ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮವಾಗಿದ್ದೇನೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಬರೆದು ಕೊಂಡಿದ್ದಾರೆ.
ಆರ್. ಚಂದ್ರು ಅವರು ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದು, ಅವರೇ ಬಂಡವಾಳ ಹೂಡಿದ್ದಾರೆ.
90 ಹೊಡಿ ಮನೇಗ್ ನಡಿ…. 500ನೇ ಸಿನಿಮಾಗೆ ನಾಯಕರಾದ ವೈಜನಾಥ ಬಿರಾದರ್..!
ಆ ಡೈರಕ್ಟರ್ ಜೊತೆ ರಶ್ಮಿಕಾ ಚರ್ಚೆ : ಬಾಲಿವುಡ್ ನಲ್ಲಿ ರಶ್ಮಿಕಾ ಸದ್ದು…