ಉಪೇಂದ್ರ ಎಂಬ ಹೆಸರಿನ ನಾನು, ರಾಜ್ಯದ ಮುಖ್ಯಮಂತ್ರಿಯಾದ್ರೆ…

1 min read

ಉಪೇಂದ್ರ ಎಂಬ ಹೆಸರಿನ ನಾನು, ರಾಜ್ಯದ ಮುಖ್ಯಮಂತ್ರಿಯಾದ್ರೆ…

ಸ್ಯಾಂಡಲ್ ವುಡ್ ನ ಬುದ್ಧಿವಂತ ಉಪೇಂದ್ರ ಸಿನಿಮಾ ಹೊರೆತು ಪಡಿಸಿ ತಮ್ಮದೇ ಹಾದಿಯಲ್ಲಿ ಸಾಗುತ್ತ ಜನಸೇವೆ ಮಾಡುತ್ತಿದ್ದಾರೆ. ಉಪ್ಪಿ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯದಲ್ಲೂ ದೊಡ್ಡ ಬದಲಾವಣೆ ತರಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಒಂದು ಹೊಸ ಅಲೋಚನೆಯೊಂದಿಗೆ ಜನರ ಮುಂದೆ ಬಂದಿರುವ ಉಪೇಂದ್ರ ಸೋಶಿಯಲ್ ಮೀಡಿಯಾ ಮೂಲಕ, ಮಾಧ್ಯಮಗಳ ಸಂದರ್ಶನಗಳ ಮೂಲಕ ತಮ್ಮ ನಿಲುವು ಏನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇದೀಗ ಅವರು ಜನರಿಗೊಂದು ಪ್ರಶ್ನೆ ಕೇಳಿದ್ದಾರೆ.

ಉಪೇಂದ್ರ ಅವರು ತಮ್ಮ ಫೇಸ್ ಬುಕ್ ನಲ್ಲಿ ಒಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ನಾನು ಉಪೇಂದ್ರ… ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ? ನೀವು ನನ್ನನ್ನ ಗೆಲ್ಲಿಸ್ತೀರಾ?’ ಎಂಬ ಪ್ರಶ್ನೆಯೊಂದಿಗೆ ಅವರು ಮಾತು ಆರಂಭಿಸಿದ್ದಾರೆ.

ನೋಡಿ ನಾನು ಸಮಾಜ ಸೇವೆ ಮಾಡ್ತಿದೀನಿ !
ರೈತರಿಂದ ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚ್ತಿದೀನಿ,
ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ,
ಆಡಳಿತ ಪಕ್ಷ, ವಿರೋದ ಪಕ್ಷ ಜನರಿಗೆ ಏನೂ ಮಾಡ್ದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳ್ತೀನಿ,
ಇವರನ್ನೆಲ್ಲಾ ಕಿತ್ಹಾಕಿ ನನಗೆ ಒಂದು ಅವಕಾಶ ಕೊಡಿ
ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ, ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ !
ನನ್ನನ್ನ ಗೆಲ್ಲಸ್ತೀರಾ

ನೀವು ನನ್ನನ್ನ ಗೆಲ್ಲಸ್ತೀರೋ ಸೋಲಸ್ತೀರೋ…. ?
ಆದ್ರೆ …..
ನಾನು ಎಲೆಕ್ಷನ್ ಗೆ ನಿಲ್ಲಲ್ಲ.

ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೇ ? ಅಂತ ಕೇಳ್ತೀರಾ ?
ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿರೋರು ಫೇಮಸ್ ವ್ಯಕ್ತಿಗಳು ಮೇಲೆ ಹೇಳಿದ ಯಾವ ಕ್ವಾಲಿಟೀ ಇರೋ ನಾಯಕರು ನಿಲ್ಲಲ್ಲ,
ದೊಡ್ಡ ನಾಯಕರನ್ನ ಕೊಡೋದು ರಾಜಕೀಯ !
ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೊ ಸಾಮಾನ್ಯರು ಚುನಾವಣೆಗೆ ನಿಲ್ತಾರೆ.,
ಬರೀ ಪ್ರಜಾಕೀಯ ವಿಚಾರ ತಳ್ಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡ್ತಾರೆ.
ಪ್ರಜಾಕೀಯದ ಕಾರ್ಯವೈಖರಿ ತರ ಕೆಲಸ ಮಾಡ್ಲಿಲ್ಲ , ನಿಮಗೆ ಅವನ/ಅವಳ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ………..
ನಾನು ಉಪೇಂದ್ರ
ಅ ಒ ಆಗಿ ನಿಮ್ ಜೊತೆ ನಿಲ್ತೀನಿ,
ನಿಮ್ ಜೊತೆ ಉಗ್ರ ಹೋರಾಟ ಮಾಡಿ, ಅಂತಾ ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ.
ಈ ವ್ಯವಸ್ಥೆ ಸರೀ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ….
ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು/ ಅವಳು ಕೆಳಗಿಳೀಬೇಕು
ಅಂತಾ ಕಾನೂನು ಬರ್ಬೇಕು.
ಅದಕ್ಕೆ
ನಿಮ್ ಜೊತೆ ನಾನು ಯಾವಾಗ್ಲೂ ಇರೋ ಕಾಮನ್ ಮೆನ್ ಜನ ಸಾಮಾನ್ಯ … ?
ಇಲ್ಲ ಇಲ್ಲ …. ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ.
ಸರೀನಾ ?

ಎಂದು ಉಪೇಂದ್ರ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಮೆಂಟ್ ಗಳು ಬರುತ್ತಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd