ಯುಎಸ್ ಓಪನ್ ಚಾಂಪಿಯನ್ : ಮೆಡ್ಬೆಡೆವ್ ಗೆ ಕಿರೀಟ
ನ್ಯೂಯಾರ್ಕ್ : ಯುಎಸ್ ಓಪನ್ ಫೈನಲ್ ನಲ್ಲಿ ಡ್ಯಾನಿಲ್ ಮೆಡ್ವೆಡೆವ್ ಗೆಲುವಿನ ನಗೆ ಬೀರಿದ್ದು, ನೋವಾಕ್ ಜೊಕೊವಿಕ್ ಆಘಾತಕಾರಿ ಸೋಲನುಭವಿಸಿದ್ದಾರೆ.
ಫೈನಲ್ ನಲ್ಲಿ ಡ್ಯಾನಿಲ್ ಅವರು, 6-4, 6-4, 6-4 ನೇರ ಸೆಟ್ ಗಳಿಂದ ಗೆಲುವು ಸಾಧಿಸಿದ್ದಾರೆ.
ಇದರೊಂದಿಗೆ ಮೆಡ್ಬೆಡೆವ್ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ಅಮೆರಿಕನ್ ಓಪನ್ ಟೆನಿಸ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.
ಇನ್ನು ಜೊಕೊವಿಕ್ ಪ್ರಶಸ್ತಿ ಗೆಲ್ಲದೇ ಇದ್ದರೂ ಎಲ್ಲ ಗ್ರ್ಯಾಂಡ್ ಸ್ಲಾಮ್ ಗಳ ಫೈನಲ್ ತಲುಪುವ ಮೂಲಕ ದಾಖಲೆ ಬರೆದಿದ್ದಾರೆ.
ಈಗಾಗಲೇ ಟೆನಿಸ್ ದಿಗ್ಗಜರಾದ ಫೆಡರರ್ ಹಾಗೂ ನಡಾಲ್ 20 ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ಜೊಕೊವಿಕ್ ಜತೆ ಸಮಾನ ಸ್ಥಾನ ಹಂಚಿಕೊಂಡಿದ್ದಾರೆ.
ಅಂದಹಾಗೆ ಮೆಡ್ವೆಡೆವ್ ಅವರನ್ನು ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಆ ಸೇಡನ್ನು ಯುಎಸ್ ಓಪನ್ ನಲ್ಲಿ ಡ್ಯಾನಿಲ್ ತೀರಿಸಿಕೊಂಡಿದ್ದಾರೆ.