Uttar Pradesh : ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ…
ಇಬ್ಬರು ಮಕ್ಕಳನ್ನ ಬಾವಿಗೆ ತಳ್ಳಿದ ತಾಯಿ ತಾನು ಆತ್ಮಹತ್ಯೆಗೆ ಮುಂದಾದ ಘಟನೆ ಉತ್ತರ ಪ್ರದೇಶದ ಲಲಿತಪುರದಲ್ಲಿ ನೆಡೆದಿದೆ. ಘಟನೆಯಲ್ಲಿ ಆಕೆಯ ಕಿರಿಯ ಮಗ ಸಾವನ್ನಪ್ಪಿದ್ದಯ, ತಾಯಿ ಮತ್ತು ಮತ್ತೊಬ್ಬ ಮಗನನ್ನ ರಕ್ಷಿಸುವಲ್ಲಿ ಸ್ಥಳಿಯರು ಯಶಸ್ವಿಯಾಗಿದ್ದಾರೆ.
ಮಹಿಳೆಯ ಹೆಸರು ಪ್ರೀತಿ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಗ ಅಂಶ್ ಪ್ರತಾಪ್ (9) ಮತ್ತು ಅಭಯ್ ಪ್ರತಾಪ್ (5) ಅವರೊಂದಿಗೆ ಪ್ರೀತಿ ಬಾವಿಗೆ ಹಾರಿದ್ದಾಳೆ. ವಿಷಯ ತಿಳಿದ ಸ್ಥಳೀಯರು ಕೂಡಲೆ ಅವರನ್ನ ಮೇಲಕ್ಕೆತ್ತಿದ್ದು ಅಷ್ಟರಲ್ಲಾಗಲೇ ಅಭಯ ಪ್ರತಾಪ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಪ್ರೀತಿ ಹಾಗೂ ಹಿರಿಯ ಮಗ ಅಂಶ್ ಪ್ರತಾಪ್ ಅವರನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರೀತಿ ವಾಸಿಸುತ್ತಿದ್ದ ಪ್ರದೇಶದಲ್ಲಿ ಇತ್ತೀಚೆಗೆ ನೆರೆಹೊರೆಯವರೊಂದಿಗೆ ಜಗಳ ನಡೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಯಾರೋ ಪಾತ್ರೆಗಳನ್ನು ಕದ್ದೊಯ್ದ ಕಾರಣ ಪ್ರೀತಿ ಮತ್ತು ಆಕೆಯ ನೆರೆಹೊರೆಯವರ ನಡುವೆ ಜಗಳ ನಡೆದಿದ್ದು, ನಂತರ ಅದೇ ವಿಷಯಕ್ಕೆ ಆಕೆಯ ಕುಟುಂಬದಲ್ಲಿ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಕಾರಣಗಳಿಂದ ಪ್ರೀತಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Uttar Pradesh: Mother jumps into well with two children