ಅಭಿವೃದ್ಧಿ ಕಾರ್ಯಗಳಿಂದ ಮಾತ್ರ ಮತದಾರರ ಋಣ ತೀರಿಸಲು ಸಾಧ್ಯ : ಸಚಿವ ವಿ.ಸೋಮಣ್ಣ

1 min read

ಅಭಿವೃದ್ಧಿ ಕಾರ್ಯಗಳಿಂದ ಮಾತ್ರ ಮತದಾರರ ಋಣ ತೀರಿಸಲು ಸಾಧ್ಯ : ಸಚಿವ ವಿ.ಸೋಮಣ್ಣ

ಬೆಂಗಳೂರು : ಗೋವಿಂದರಾಜನಗರ ಕ್ಷೇತ್ರದ ಕಾವೇರಿಪುರದಲ್ಲಿ ನೂತನವಾಗಿ‌ ನಿರ್ಮಿಸಲಾದ ಶ್ರೀ ಬಲಮುರಿ ಗಣಪತಿ ದೇವಸ್ಥಾನವನ್ನು ವಸತಿ ಸಚಿವ ವಿ.ಸೋಮಣ್ಣ ಅವರು ಇಂದು ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಸಚಿವರು, ಈ ಭಾಗದಲ್ಲಿ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ ನಿರ್ಮಿಸಲಾಗಿದೆ.

ಅಲ್ಲದೇ ಕ್ಷೇತ್ರದಾದ್ಯಂತ ಹತ್ತಾರು ದೇವಸ್ಥಾನಗಳನ್ನು ‌ನಿರ್ಮಾಣ ಹಾಗೂ ಜೀರ್ಣೋದ್ಧಾರ ಮಾಡುವ ಮೂಲಕ ಕ್ಷೇತ್ರದ ಜನತೆಯ ಸಾಮರಸ್ಯದ ಜೀವನಕ್ಕೆ ಅನೇಕ ಮಾಡಿಕೊಡಲಾಗಿದೆ.

ಈ ಮೂಲಕ ನಮ್ಮ‌ ಪೂರ್ವಿಕರ ಸತ್ ಸಂಪ್ರದಾಯಗಳನ್ನು‌ ಮುಂದುವರೆಸಿಕೊಂಡು ಹೋಗಲು ಅನುವು ಮಾಡಿಕೊಡಲಾಗಿದೆ.

ಇನ್ನು‌ ಕೆಲವೇ ದಿನಗಳಲ್ಲಿ ಇಲ್ಲಿ ಅಂಗನವಾಡಿ ಕೇಂದ್ರವನ್ನು‌ ಲೋಕಾರ್ಪಣೆ ಮಾಡಲಾಗುವುದು.

ಒಬ್ಬ ಮತದಾರನಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಮಾತ್ರ ಆತನ ಋಣ ತೀರಿಸಲು ಸಾಧ್ಯ‌ ಎಂದರು

ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಮಂಡಲದ ಅಧ್ಯಕ್ಷ ವಿಶ್ವನಾಥ ಗೌಡ, ಮಾಜಿ ಕಾರ್ಪೊರೇಟರ್ ಗಳು ಸೇರಿದಂತೆ ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.

v. somanna inaugurate balamuri ganesha temple in bangalore

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd