700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ: ಜರ್ಮನಿ Saaksha Tv
ಬರ್ಲಿನ್: ಜನರು ಕರೋನಾ ವ್ಯಾಕ್ಸಿನ್ ಪಡೆಯಲು 700 ಕುರಿಗಳನ್ನು ಬಳಸಿ ಸಂದೇಶ ನೀಡಿದ್ದಾರೆ. ಕುರಿಗಳನ್ನು ಸಿರಿಂಜ್ ಆಕೃತಿಯಲ್ಲಿ ನಿಲ್ಲಿಸಿ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಪೋಟೊ, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದು ಜನರನ್ನು ಉತ್ತೇಜಿಸಲು ಮಾಡಲಾಗಿದೆ ಎಂದು ಹೇಳಲಾಗಿದೆ. ಸದ್ಯ ಫೋಟೋಗಳು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜರ್ಮನಿಯಲ್ಲಿ ಕೊರೊನಾ ಹೆಚ್ಚುತ್ತಿದ್ದರು, ಜನ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜರ್ಮನ್ ಪಟ್ಟಣವಾದ ಷ್ನೆವರ್ಡಿಂಗನ್ನಲ್ಲಿ ತನ್ನದೇ ತಂಡವನ್ನು ಕಟ್ಟಿಕೊಂಡು ಕುರಿಗಳ ಮೂಲಕ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 100 ಮೀ ಉದ್ದದ ಸಿರಿಂಜ್ ಆಕೃತಿಯನ್ನು 700 ಕುರಿಗಳ ಮೂಲಕ ನಿರ್ಮಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.