ಅಜಿತ್ ನಟನೆಯ ವಲಿಮೈ ಜ.13 ಕ್ಕೆ ರಿಲೀಸ್ ಆಗುತ್ತಾ..? ಪೋಸ್ಟ್ ಪೋನ್ ಆಗುತ್ತಾ..?
ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ ಬಹುನಿರೀಕ್ಷೆಯ ‘ವಲಿಮೈ’ ಸಿನಿಮಾ ಜನವರಿ 13 ಕ್ಕೆ ರಿಲೀಸ್ ಆಗಬೇಕಿತ್ತು.. ಆದ್ರೆ ದೇಶದಲ್ಲಿ ಕೋವಿಡ್ ನಿಂದಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನ ಗಮನಿಸಿದ್ರೆ ಈ ಸಿನಿಮಾ ಕೂಡ RRR ಸಿನಿಮಾದ ಮಾದರಿಯಲ್ಲೇ ಪೋಸ್ಟ್ ಪೋನ್ ಆಗಲಿದೆ ಎನ್ನಲಾಗ್ತಿದೆ..
ಇತ್ತೀಚೆಗೆ ಸಿನಿಮಾದ ನಿರ್ಮಾಪಕ ಬೋನಿ ಕಪೂರ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿ ಸಿನಿಮಾ ಜ.13ಕ್ಕೆ ತಮಿಳು , ತೆಲುಗು , ಹಿಂದಿಯಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದರು.. ಆದ್ರೂ ಕೂಡ ಕೋವಿಡ್ ಹಾವಳಿ ಹೆಚ್ಚಾಗ್ತಲೇ ಇರೋ ಕಾರಣ ಹಲವೆಡೆ ಲಾಕ್ ಡೌನ್ , ವೀಕೆಂಡ್ ಕರ್ಫ್ಯೂ ಜಾರಿಯಾಗ್ತಿದ್ದು , ಥಿಯೇಟರ್ ಗಳಲ್ಲಿ 50 % ಸೀಟಿಂಗ್ ವಿಧಿಸಲಾಗ್ತಿದೆ..
ಅಲ್ಲದೇ ಇದೇ 10 ರಂದು ತಮಿಳು ನಾಡು ಸರ್ಕಾರ ವೀಕೆಂಡ್ ಕರ್ಫ್ಯೂ ಆದೇಶ ಹೊರಡಿಸುವ ಸಾಧ್ಯತೆಯಿರುವುದರಿಂದ ಸಿನಿಮಾ ಪೋಸ್ಟ್ ಪೋನ್ ಆಗುವ ಬಹುತೇಕ ಸಾಧ್ಯತೆಗಳಿವೆ ಎನ್ನಲಾಗ್ತಾಯಿದೆ.. ಬೋನಿ ಕಪೂರ್ ಅವರು ಈ ಹಿಂದೆ ಟ್ವೀಟ್ ಮಾಡಿದ್ದಾಗ ಎಲ್ಲಾ ಸರಿಯಾಗಿಯೇ ಇದ್ರೆ ಇದು ಅಜಿತ್ ಅವರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಎಂದಿದ್ದರು..
ಸದ್ಯಕ್ಕೆ ಸಿನಿಮಾ ಅಂಗಳದಲ್ಲಿ ಕೇಳಿ ಬರುತ್ತಿರುವ ವದಂತಿಗಳ ಪ್ರಕಾರ ಸಿನಿಮಾ ಪೋಸ್ಟ್ ಆಗುವುದು ಬಹುತೇಕ ಖಚಿತವೆನ್ನಲಾಗ್ತಿದೆ.. ಈ ಸಿನಿಮಾಗೆ ಹೆಚ್. ವಿನೋತ್ ಅವರು ಆಕ್ಷನ್ ಕಟ್ ಹೇಳಿದ್ದು, ಟ್ರೇಲರ್ ಯೂಟ್ಯೂಬ್ ನಲ್ಲಿ ಈಗಾಗಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದು, ಸಿನಿಮಾ ರಿಲೀಸ್ ಗಾಘಿ ಫ್ಯಾನ್ಸ್ ಕಾತರರಾಗಿದ್ದಾರೆ..