ನನ್ನಮ್ಮ ಸೂಪರ್ ಸ್ಟಾರ್ ಗ್ರಾಂಡ್ ಫಿನಾಲೆ : ವಂಶಿಕಾ – ಯಶಸ್ವಿನಿಗೆ ಪಟ್ಟ
1 min read
ನನ್ನಮ್ಮ ಸೂಪರ್ ಸ್ಟಾರ್ ಗ್ರಾಂಡ್ ಫಿನಾಲೆ : ವಂಶಿಕಾ – ಯಶಸ್ವಿನಿಗೆ ಪಟ್ಟ
ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಸೀಸನ್ 1 ಮುಕ್ತಾಯಗೊಂಡಿದೆ. ಭಾನುವಾರ (ಏ.3) ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಮಾಸ್ಟರ್ ಆನಂದ್, ತಾಯಿ ಯಶಸ್ವಿನಿ ಮಗಳು ವಂಶಿಕಾ ಅಂಜನಿ ಕಶ್ಯಪ ವಿನ್ನರ್ ಆಗಿದ್ದು ಟೋಫ್ರಿಗೆ ಮುತ್ತಿಟ್ಟಿದ್ದಾರೆ.
ಅಮ್ಮ ಮತ್ತು ಮಗಳ ನಡುವೆ ನಡೆದ ಈ ಶೋ ವಿಶೇಷತೆಗಳಿಂದ ವೀಕ್ಷಕರ ಮನಗೆದ್ದಿತ್ತು. ತನ್ನದೇ ಆದ ಪ್ರೇಕ್ಷಕರನ್ನ ಸೃಷ್ಟಿಸಿಕೊಂಡಿತ್ತು. ಅದರಲ್ಲೂ ಚಿನಕುರುಳಿ ಪಟಾಕಿ ವಂಶಿಕಾ ಎಲ್ಲರ ಮನಸೂರೆಗೊಂಡಿದ್ದಳು. ಪಟಪಟ ಮಾತಾಡುತ್ತಿದ್ದ ವಂಶಿಕಾಗೆ ಈ ಬಾರಿ ವಿನ್ನರ್ ಪಟ್ಟ ಸಿಗಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಅಂತೆಯೇ ಯಶಸ್ವಿನಿ ಮತ್ತು ವಂಶಿಕಾಗೆ ವಿನ್ನರ್ ಪಟ್ಟ ದಕ್ಕಿದೆ.
ತಾಯಿ ಮಗುವನ್ನು ಎತ್ತಿಕೊಂಡಿರುವಂತೆ ರಚಿಸಲಾಗಿರುವ ಟ್ರೋಫಿಯನ್ನು ವಂಶಿಕಾ ಮತ್ತು ಯಶಸ್ವಿನಿಗೆ ನೀಡಲಾಯಿತು. ಟ್ರೋಫಿ ಜೊತೆಗೆ 5 ಲಕ್ಷ ರೂ. ನಗದು ಬಹುಮಾನ ಕೂಡ ನೀಡಲಾಗಿದೆ. ಖ್ಯಾತ ನಿರೂಪಕ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ದಂಪತಿಯ ಮುದ್ದಿನ ಮಗಳಾಗಿರುವ ವಂಶಿಕಾ, ಮೊದಲ ದಿನದಿಂದಲೇ ವೀಕ್ಷಕರ ಮನಗೆದ್ದಿದ್ದಳು. ತನ್ನ ಮುದ್ದಾದ ಮಾತುಗಳಿಂದ, ಚುರುಕುತನದಿಂದ ಎಲ್ಲರ ಮನೆ ಮಾತಾಗಿದ್ದಳು.
ಕಿರುತೆರೆ ಪ್ರೇಕ್ಷಕರಿಗೆ ‘ನನ್ನಮ್ಮ ಸೂಪರ್ ಸೂಪರ್ ಸ್ಟಾರ್’ ಕಾರ್ಯಕ್ರಮದ ಸ್ಪರ್ಧಿಗಳು ಹಲವು ತಿಂಗಳ ಕಾಲ ಮನರಂಜನೆ ನೀಡಿದರು. ವಿದ್ಯಾ-ರೋಹಿತ್, ಸುಪ್ರಿತಾ-ಇಬ್ಬನಿ, ಜಾನ್ವಿ-ಗ್ರಂಥ್, ಪುನೀತಾ-ಆರ್ಯ, ಯಶಸ್ವಿನಿ-ವಂಶಿಕಾ, ನಂದಿನಿ-ಅದ್ವಿಕ್ ಅವರು ಫಿನಾಲೆ ತಲುಪಿದ್ದರು. ಭಾನುವಾರ ಸಂಜೆ ನಡೆದ ಫಿನಾಲೆಯಲ್ಲಿ ವಿನ್ನರ್ ಯಾರು ಎಂಬುದನ್ನು ನಟಿ ತಾರಾ ಅನುರಾಧ ಅವರು ಘೋಷಿಸಿದರು.
ವಂಶಿಕಾಗೆ ಟಫ್ ಫೈಟ್ ಕೊಟ್ಟಿದ್ದು ಬೇಬಿ ಆರ್ಯ. ಅಮ್ಮ ಪುನೀತಾ ಜೊತೆ ಸೈಲೆಂಟಾಗೇ ಎಂಟ್ರಿ ಕೊಟ್ಟ ಆರ್ಯ ಕೊನೆಗೆ ಜಬರ್ದಸ್ತ್ ಮನರಂಜನೆ ಕೊಟ್ಟ ಪುಟಾಣಿ, ಇದೀಗ ಎರಡನೇ ಸ್ಥಾನದಲ್ಲಿ ಗೆದ್ದಿದ್ದಾಳೆ. ಮೂರನೇ ಸ್ಥಾನ ಮಾಸ್ ಬೇಬಿ ಎಂದೇ ಹೆಸರು ಪಡೆದುಕೊಂಡಿದ್ದ ರೋಹಿತ್ ಮುಡಿಗೇರಿದೆ.
ಅನುಪಮ ಗೌಡ ನಿರೂಪಣೆ, ತಾರಾ ಅನೂರಾಧ, ಸೃಜನ್ ಲೋಕೇಶ್ ಹಾಗೂ ಅನುಪ್ರಭಾಕರ್ ಜಡ್ಜಸ್ ಆಗಿದ್ದ ಪ್ರೇಕ್ಷಕರನ್ನ ನಾಲ್ಕು ತಿಂಗಳ ಕಾಲ ರಂಜಿಸಿತ್ತು.