ನಿಯಂತ್ರಣ ತಪ್ಪಿ ಬೈಕ್ ಮತ್ತು ಕಾರುಗಳಿಗೆ ವಾಹನ ಡಿಕ್ಕಿ Saaksha Tv
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ಬೈಕ್ ಮತ್ತು ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಮಂಗಳೂರಿನ ಉರ್ವ ಚಿಲಿಂಬಿ ಮಠದ ಕಣಿ ಕ್ರಾಸ್ ರೋಡ್ನಲ್ಲಿ ನಡೆದಿದೆ.
ವಿವೇಕಾನಂದ ಶೆಣೈ ಎಂಬವರು ಕಾರು ಚಲಾಯಿಸುತ್ತಿದ್ದರು. ಕಾರು ಚಲಾಯಿಸುವಾಗ ಕಾರಿನ ಬ್ರೇಕ್ ಪೆಡಲ್ನಲ್ಲಿ ನೀರಿನ ಬಾಟಲ್ ಸಿಲುಕಿಕೊಂಡಿತ್ತು. ಕಾರಿಗೆ ಬ್ರೇಕ್ ಹಾಕಲು ಸಾಧ್ಯವಾಗಲ್ಲಿಲ್ಲ. ಇದರಿಂದ ಕಾರು ಚಲಕನ ನಿಯಂತ್ರಣ ತಪ್ಪಿ ರಸ್ತೆಯ ಮತ್ತೊಂದು ಬದಿಗೆ ಬಂದು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನ ಜಖಂ ಆಗಿದೆ. ದ್ವಿಚಕ್ರ ವಾಹನ ಸವಾರನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.