ಅಕ್ಟೋಬರ್ ನಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನ ಬದಲಿಸುತ್ತಿವೆ. ಸಂಪತ್ತು ಮತ್ತು ಸಮೃದ್ಧಿ ಕರುಣಿಸುವ ಶುಕ್ರ ಗ್ರಹ ತನ್ನ ಸ್ಥಾನ ಬದಲಾಯಿಸುತ್ತಿದೆ. ಅಕ್ಟೋಬರ್ 2 ರಂದು ಶುಕ್ರನು ಸಿಂಹ ರಾಶಿ ಪ್ರವೇಶ ಮಾಡಲಿದ್ದಾನೆ. ಶುಕ್ರ ತನ್ನ ಸ್ಥಾನವನ್ನು ಬದಲಿಸುವ ಪರಿಣಾಮ ಎಲ್ಲ ದ್ವಾದಶ ರಾಶಿಯವರ ಜಾತಕದಲ್ಲಿ ಗೋಚರಿಸಲಿದೆ.
ಶುಕ್ರನಿಂದಾಗಿ ಕೆಲವು ರಾಶಿಯವರಿಗೆ ಗೌರವ ಮತ್ತು ಸ್ಥಾನಮಾನ ಸಿಗುತ್ತದೆ. ಜಾತಕದಲ್ಲಿ ಶುಕ್ರನು ದುರ್ಬಲವಾದಾಗ, ವ್ಯಕ್ತಿಯ ಜೀವನದಲ್ಲಿ ಸುಖ ಸಂತೋಷವು ಕಡಿಮೆಯಾಗುತ್ತದೆ. ಶುಕ್ರನು ಕರ್ಕ ರಾಶಿಯಲ್ಲಿದ್ದು ಅಕ್ಟೋಬರ್ 2 ರಂದು ಸಿಂಹ ರಾಶಿ ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ಶುಕ್ರನ ರಾಶಿಯ ಬದಲಾವಣೆಯು 3 ರಾಶಿಯವರ ಆದಾಯ ಮತ್ತು ಅದೃಷ್ಟ ಹೆಚ್ಚಿಸುತ್ತದೆ.
ವೃಷಭ ರಾಶಿ :
ವೃಷಭ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ರಾಶಿಯವರ ಅಧಿಪತಿ ಗ್ರಹ ಗುರು. ಶುಕ್ರ ಸಂಕ್ರಮಣವು ಈ ರಾಶಿಯ ಜನರಿಗೆ ವಿಶೇಷ ಫಲ ನೀಡುತ್ತದೆ. ಈ ರಾಶಿಯವರ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಹೆಚ್ಚುವುದು. ಶುಭ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ.
ಸಿಂಹ ರಾಶಿ :
ಈ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಮನಸ್ಸಿನ ಇಚ್ಛೆಯಂತೆ ಯಶಸ್ಸನ್ನು ಸಾಧಿಸುತ್ತಾರೆ. ಕೈ ಕೊಟ್ಟಿದ್ದ ಕೆಲಸ ಕೂಡಾ ಈ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ. ಈ ರಾಶಿಯ ಜನರ ಆದಾಯವನ್ನು ಹೆಚ್ಚಿಸುತ್ತದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳಿಗೆ ವೇಗ ಸಿಗಲಿದೆ.
ತುಲಾ ರಾಶಿ :
ಈ ರಾಶಿಯವರ ಮೇಲೆ ತಾಯಿ ದುರ್ಗೆಯ ವಿಶೇಷ ಆಶೀರ್ವಾದವಿರುತ್ತದೆ. ತುಲಾ ರಾಶಿಯವರಿಗೆ ಈ ಅವಧಿಯಲ್ಲಿ ವಿಶೇಷ ಸಂತೋಷ ಸಿಗುತ್ತದೆ. ತುಲಾ ರಾಶಿಯವರು ಅಕ್ಟೋಬರ್‌ನಲ್ಲಿ ಶುಕ್ರನ ಸಂಚಾರದಿಂದ ವಿಶೇಷ ಫಲ ಪಡೆಯುತ್ತಾರೆ.