ಕ್ಯಾಟ್ ಜೊತೆಗೆ ಮದುವೆಯ ನಂತರ ವಿಕ್ಕಿ ಕೌಶಲ್ ಗೆ ಹೊಸ ಸಂಕಷ್ಟ – ಏನದು..???
ಬಾಲಿವುಡ್ ನಟಿ ಕತ್ರಿನಾ ಹಾಗೂ ನಟ ವಿಕ್ಕಿ ಕೌಶಲ್ ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. ಮದುವೆಯಾದ ಮೇಲೂ ಈ ಇಬ್ಬರೂ ಕೂಡ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಈ ನಡುವೆ ವಿಕ್ಕಿ ಕೌಶಲ್ ಹೊಸದೊಂದು ತಲೆ ನೋವು ಶುರುವಾಗಿದೆ..
ಅಂದ್ಹಾಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಸಾಮಾನ್ಯ ವ್ಯಕ್ತಿಯೊಬ್ರು ವಿಕ್ಕಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ… ಹೌದು.. ವಿಕ್ಕಿ ಕೌಶಾಲ್ ಮತ್ತು ನಟಿ ಸಾರಾ ಅಲಿಖಾನ್ ಒಟ್ಟಾಗಿ ಮಾಡುತ್ತಿರುವ ಸಿನಿಮಾವೊಂದರ ಶೂಟಿಂಗ್ ಇಂದೋರ್ ನಲ್ಲಿ ನಡೆಯುತ್ತಿತ್ತು.. ಶೂಟಿಂಗ್ ನ ಭಾವವಾಗಿ ವಿಕ್ಕಿ ಮತ್ತೆ ಸಾರಾ ಬೈಕ್ ಓಡಿಸಿದ್ದರು.. ಈ ಸಂಬಂಧಿತ ಫೋಟೋ ವಿಡಿಯೋಗಳು ವೈರಲ್ ಆಗಿದ್ವು.. ಈ ಸಿನಿಮಾದಲ್ಲಿ ಸಾರಾ ವಿಕ್ಕಿ ಡಿ ಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.. ಆದ್ರೆ ಇದೇ ಬೈಕ್ ಈ ವಿಕ್ಕಿಗೆ ಸಂಕಷ್ಟ ತಂದಿದೆ..
ಹೌದು.. ವಿಕ್ಕಿ ವಿರುದ್ಧ ಇಂದೋರ್ ಮೂಲದ ನಿವಾಸಿ ಜೈ ಸಿಂಗ್ ಯಾದವ್ ಎಂಬುವವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.. ದೂರಿನಲ್ಲಿ ನನ್ನ ಅನುಮತಿ ಇಲ್ಲದೇ ನನ್ನ ಗಾಡಿಯ ನಂಬರ್ ಪ್ಲೇಟ್ ನ ಸಿನಿಮಾದಲ್ಲಿ ಬಳಸಲಾಗಿದೆ ಎಂದು ದೂರಿದ್ದಾರೆ..
ಪೊಲೀಸರು ದೂರು ದಾಖಲಿಸಿಕೊಂಡಿದ್ದು , ನಂಬರ್ ಪ್ಲೇಟ್ ದುರ್ಬಳಕೆಯಾಗಿದ್ಯಾ ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ.. ಈ ಬಗ್ಗೆ ಪಮಾಹಿತಿ ನೀಡಿರೋ ಪೊಲೀಸರು ಮೋಟಾರ್ ಸೈಕಲ್ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲಾಗುವುದು, ಚಿತ್ರತಂಡ ಇಂದೋರ್ ನಲ್ಲಿಯೇ ಇದ್ದರೆ ಅವರನ್ನೂ ವಿಚಾರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ..