ಬೆಂಗಳೂರು : ಪತಿಯ ಮೊಬೈಲ್ ಗೆ ಪತ್ನಿಯ ಅಕ್ರಮ ಸಂಬಂಧದ ವಿಡಿಯೋ ಬಂದರೆ ಹೇಗಾಗಬೇಡ. ಅದೇ ರೀತಿಯ ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಪತ್ನಿಯನ್ನೇ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ ನಡೆದಿದೆ.
ಶಂಕರ್ ಕೊಲೆ ಮಾಡಿದ ಪತಿ ಎನ್ನಲಾಗಿದ್ದು, ಪತ್ನಿ ಗೀತಾಳನ್ನು ಹತ್ಯೆ ಮಾಡಿದ್ದಾನೆ. ನಂತರ ಆಕೆಯ ತಾಯಿಗೆ ಕೊಲೆ ಮಾಡಿ ವಿಚಾರ ಹೇಳಿದ್ದಾನೆ. ಗುತ್ತಿಗೆದಾರನಾಗಿದ್ದ ಆರೋಪಿ ಶಂಕರ್ 13 ವರ್ಷಗಳ ಹಿಂದೆ ಗೀತಾಳನ್ನು ಮದುವೆಯಾಗಿದ್ದ. ಈ ದಂಪತಿಗೆ ಒಂದು ಗಂಡು ಮಗು ಇತ್ತು. ಆದರೆ, ಪತ್ನಿ ಗೀತಾ ಬೇರೋಬ್ಬನ ಜೊತೆ ಸಂಬಂಧ ಇಟ್ಟುಕೊಂಡಿರುವ ಕುರಿತು ಪತಿಗೆ ಅನುಮಾನ ಬಂದಿತ್ತು. ಹೀಗಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈ ಮಧ್ಯೆ ಪತಿಯ ಕೈಗೆ ಪತ್ನಿಯ ರಾಸಲೀಲೆಯ ವಿಡಿಯೋ ಸಿಕ್ಕಿದೆ ಎನ್ನಲಾಗಿದ್ದು, ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ. ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ, ಆರೋಪಿಯ ಮೊಬೈಲ್ ಗೆ ವಿಡಿಯೋ ಕಳುಹಿಸಿದ್ದ ಎನ್ನಲಾಗಿದೆ. ಈ ಕುರಿತು ಜಗಳ ನಡೆದು, ಎಲ್ಲ ಬಿಟ್ಟು ಇರುವಂತೆ ಪತಿ ಹೇಳಿದ್ದ ಎನ್ನಲಾಗಿದೆ. ಆದರೂ ಪತ್ನಿ ಮಾತ್ರ ಆ ಚಾಳಿ ಬಿಟ್ಟಿರಲಿಲ್ಲ ಎನ್ನಲಾಗಿದ್ದು, ಕೊನೆಗೆ ಪತಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಚಂದ್ರಲೇಔಟ್ (Chandra Layout) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.